ಸಾರಾಂಶ
ಶಬ್ಬಾಷ್ ಸಿನಿಮಾಕ್ಕೆ ಕ್ಲಾಪ್ ಮಾಡಿದ ಓಂ ಸಾಯಿ ಪ್ರಕಾಶ್.
ಕನ್ನಡಪ್ರಭ ಸಿನಿವಾರ್ತೆ
ರುದ್ರಶಿವ ನಿರ್ದೇಶನದ `ಶಬ್ಬಾಷ್’ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆದಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರುದ್ರಶಿವ, ‘ಇದೊಂದು ಮಾಸ್ ಆ್ಯಕ್ಷನ್ ಡ್ರಾಮಾ ಸಿನಿಮಾ. ‘ಹೊಡಿರೋ ಸೆಲ್ಯೂಟ್’ ಎಂಬ ಅಡಿಬರಹವಿದೆ. ಈ ಶೀರ್ಷಿಕೆಯ ಹಿನ್ನೆಲೆ ಸಿನಿಮಾದ ಕೊನೆಯಲ್ಲಿ ತೆರೆದುಕೊಳ್ಳುತ್ತದೆ. ಶಂಕರ್ ಮಹಾದೇವನ್, ಜೋಗಿ ಪ್ರೇಮ್ ಈ ಸಿನಿಮಾದ ಹಾಡಿಗೆ ದನಿಯಾಗಿದ್ದಾರೆ’ ಎಂದರು. ಪವೀಂದ್ರ ಮುತ್ತಪ್ಪ ಈ ಸಿನಿಮಾದ ನಿರ್ಮಾಪಕರು. ನಾಯಕ ಶರತ್ ನಾಲ್ಕು ವರ್ಷಗಳ ಬಳಿಕ ಈ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದರು. ನಾಯಕಿ ನಿಸರ್ಗ ಫ್ಯಾಷನ್ ಡಿಸೈನಿಂಗ್ ಹಿನ್ನೆಲೆಯವರು. ಈ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದೆಡೆ ಚಿತ್ರೀಕರಣ ನಡೆಯಲಿದೆ.