ಸೋದರರ ಪುಸ್ತಕ ಒಂದೇ ದಿನ ಬಿಡುಗಡೆ!

| Published : Dec 16 2023, 02:00 AM IST

ಸಾರಾಂಶ

ಬೆಂಗಳೂರಿನ ಸಪ್ನ ಬುಕ್‌ ಹೌಸ್‌ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಪುಸ್ತಕೋತ್ಸವವನ್ನಾಗಿ ಆಚರಿಸಿ, ಅಷ್ಟೇ ಸಂಖ್ಯೆಯ ಕೃತಿಗಳನ್ನು ಬಿಡುಗಡೆ ಮಾಡಿಕೊಂಡು ಬರುತ್ತಿದೆ. ಈ ಬಾರಿ ನಡೆದ ಕನ್ನಡ ಪುಸ್ತಕೋತ್ಸವದಲ್ಲಿ ಬಿಡುಗಡೆಯಾದ ಕೃತಿಗಳಲ್ಲಿ ಮೈಸೂರಿನ ಸಹೋದರರಾದ ಪ್ರೊ.ಎಚ್‌.ಎಸ್. ಹರಿಶಂಕರ್‌ ಅವರ ಟಾಲ್‌ ಸ್ಟಾಯ್‌ ಕಥೆಗಳು, ಪ್ರೊ.ಎಚ್‌.ಎಸ್‌. ಗೋಪಿನಾಥ್‌ ಅವರ ಜಾತಕರ ವ್ಯಕ್ತಿತ್ವ ಕೃತಿ ಕೂಡ ಸೇರಿದ್ದವು.

- ಪ್ರೊ.ಎಚ್‌.ಎಸ್‌. ಹರಿಶಂಕರ್‌ ಅವರ ಟಾಲ್‌ ಸ್ಟಾಯ್‌ ಕಥೆಗಳು

- ಪ್ರೊ.ಎಚ್‌.ಎಸ್‌. ಗೋಪಿನಾಥ್‌ ಅವರ ಜಾತಕರ ವ್ಯಕ್ತಿತ್ವ

---

ಫೋಟೋ 14 ಎಂವೈಎಸ್‌ 30- ಸಪ್ನ ಬುಕ್‌ಹೌಸ್‌ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರೊ.ಎಚ್‌.ಎಸ್‌. ಹರಿಶಂಕರ್‌, ಪ್ರೊ.ಎಚ್‌.ಎಸ್‌. ಗೋಪಿನಾಥ್‌ ಅವರಿಗೆ ಗೌರವ.

14 ಎಂವೈಎಸ್‌ 31- ಟಾಲ್‌ಸ್ಟಾಯ್‌ ಕಥೆಗಳು

14 ಎಂವೈಎಸ್‌ 32- ಜಾತಕರ ವ್ಯಕ್ತಿತ್ವ

-

ಕನ್ನಡಪ್ರಭ ವಾರ್ತೆ ಮೈಸೂರು

ಸಹೋದರರಾದ ಪ್ರೊ.ಎಚ್‌.ಎಸ್‌. ಹರಿಶಂಕರ್‌ ಹಾಗೂ ಪ್ರೊ.ಎಚ್‌.ಎಸ್‌. ಗೋಪಿನಾಥ್‌ ಅವರ ಕೃತಿಗಳು ಒಂದೇ ದಿನ ಬಿಡುಗಡೆಯಾಗಿವೆ.

ಬೆಂಗಳೂರಿನ ಸಪ್ನ ಬುಕ್‌ ಹೌಸ್‌ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಪುಸ್ತಕೋತ್ಸವವನ್ನಾಗಿ ಆಚರಿಸಿ, ಅಷ್ಟೇ ಸಂಖ್ಯೆಯ ಕೃತಿಗಳನ್ನು ಬಿಡುಗಡೆ ಮಾಡಿಕೊಂಡು ಬರುತ್ತಿದೆ. ಈ ಬಾರಿ ನಡೆದ ಕನ್ನಡ ಪುಸ್ತಕೋತ್ಸವದಲ್ಲಿ ಬಿಡುಗಡೆಯಾದ ಕೃತಿಗಳಲ್ಲಿ ಮೈಸೂರಿನ ಸಹೋದರರಾದ ಪ್ರೊ.ಎಚ್‌.ಎಸ್. ಹರಿಶಂಕರ್‌ ಅವರ ಟಾಲ್‌ ಸ್ಟಾಯ್‌ ಕಥೆಗಳು, ಪ್ರೊ.ಎಚ್‌.ಎಸ್‌. ಗೋಪಿನಾಥ್‌ ಅವರ ಜಾತಕರ ವ್ಯಕ್ತಿತ್ವ ಕೃತಿ ಕೂಡ ಸೇರಿದ್ದವು.

ಇವರಿಬ್ಬರೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಶಾರದಾ ಮಂದಿರದ ಪ್ರಕಾಶನದ ಮಾಲೀಕರೂ ಶಾರದಾವಿಲಾಸ ಕಾಲೇಜಿನ ಪ್ರಾಧ್ಯಾಪಕರೂ ಆಗಿದ್ದ ದಿವಂಗತ ಎಚ್‌.ಎಂ. ಶಂಕರನಾರಾಯಣ ರಾವ್‌ ಅವರ ಪುತ್ರರು.

ಟಾಲ್‌ ಸ್ಟಾಯ್‌ ಕಥೆಗಳನ್ನು ಪ್ರೊ.ಎಚ್‌.ಎಸ್‌. ಹರಿಶಂಕರ್‌ ಅವರು ರಷ್ಯನ್‌ನಿಂದ ನೇರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರೊ.ಎಚ್‌.ಎಸ್‌. ಗೋಪಿನಾಥ್‌ ಅವರ ಜಾತಕರ ವ್ಯಕ್ತಿತ್ವ ಕೃತಿಯಲ್ಲಿ ಲಗ್ನ ಪ್ರಕರಣ, ರಾಶಿ ಪ್ರಕರಣ, ನಕ್ಷತ್ರ ಪ್ರಕರಣವನ್ನು ಉದಾರಹಣೆ ಸಹಿತ ವಿವರಿಸಲಾಗಿದೆ. ಆಸಕ್ತರು ಪ್ರೊ.ಎಚ್‌.ಎಸ್‌. ಹರಿಶಂಕರ್‌, ಮೊ. 96634 68676, ಪ್ರೊ.ಎಚ್‌.ಎಸ್‌. ಗೋಪಿನಾಥ್‌, ಮೊ. 96323 78140

ಸಂಪರ್ಕಿಸಬಹುದು.