ಸಿನಿವಾರ್ತೆ
ಫೆ.26ರಂದು ದಾಂಪತ್ಯಕ್ಕೆ ಅಡಿ ಇಡುತ್ತಿರುವ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಕೊನೆಗೂ ತಮ್ಮ ವಿವಾಹವನ್ನು ಘೋಷಿಸಿದ್ದಾರೆ. ಇಬ್ಬರೂ ಅಭಿಮಾನಿಗಳಿಗೆ ಪತ್ರ ಬರೆದಿದ್ದು, ‘ಇದು ವಿರೋಶ್ ವೆಡ್ಡಿಂಗ್’ ಎಂದು ಹೇಳಿದ್ದಾರೆ.
ಆಯ್ಕೆ ಮಾಡಿಕೊಳ್ಳುವ ಮುನ್ನವೇ ನಿಮಗೆ ಆ ಬಗ್ಗೆ ಗೊತ್ತಾಗುತ್ತದೆ
‘ನಾವು ಏನನ್ನಾದರೂ ಪ್ಲಾನ್ ಮಾಡುವ ಮೊದಲೇ, ನಮಗಾಗಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳುವ ಮುನ್ನವೇ ನಿಮಗೆ ಆ ಬಗ್ಗೆ ಗೊತ್ತಾಗುತ್ತದೆ. ಅದರ ಹಿಂದಿರುವುದು ಅಭಿಮಾನ. ಅಪಾರ ಪ್ರೀತಿಯಿಂದ ನೀವು ನಮಗೊಂದು ಹೆಸರು ಕೊಟ್ಟಿರಿ. ಆ ಹೆಸರು ‘ವಿರೋಶ್’. ಇಂದು ತುಂಬಿದ ಹೃದಯದಲ್ಲಿ ನೀವಿತ್ತ ಆ ಗೌರವದೊಂದಿಗೆ ನಮ್ಮ ಪ್ರೀತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ನಾವು ಕೂಡ ನಮ್ಮಿಬ್ಬರ ಮದುವೆಯನ್ನು ವಿರೋಶ್ ವಿವಾಹ ಎಂದೇ ಕರೆದುಕೊಳ್ಳುತ್ತೇವೆ. ನಮ್ಮಿಬ್ಬರನ್ನೂ ಇಷ್ಟೊಂದು ಪ್ರೀತಿಯಿಂದ ಎತ್ತಿ ಹಿಡಿದಿದ್ದಕ್ಕೆ ಕೃತಜ್ಞತೆಗಳು. ನೀವು ಎಂದಿನಂತೆ ನಮ್ಮ ಬದುಕಿನ ಭಾಗವಾಗಿದ್ದೀರಿ. ಬಿಗಿಯಾದ ಅಪ್ಪುಗೆ ಮತ್ತು ಪ್ರೀತಿ’ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಉದಯ್‌ಪುರದಲ್ಲಿ ಸಕಲ ಸಿದ್ಧತೆ
ಇವರ ಮದುವೆಗೆ ಉದಯ್‌ಪುರದಲ್ಲಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಮದುವೆಯಲ್ಲಿ ಆಪ್ತರಷ್ಟೇ ಭಾಗಿಯಾಗಲಿದ್ದಾರೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಅದರಲ್ಲಿ ಸಿನಿಮಾರಂಗದ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ.
