ಸಾರಾಂಶ
ಹೀರಾಮಂಡಿಯಲ್ಲಿ ಹಲ್‌ಚಲ್ ಎಬ್ಬಿಸಿದ ಹ್ಯೂಮಾ ಖುರೇಷಿ ಟಾಕ್ಸಿಕ್‌ಗೆ ಎಂಟ್ರಿ ಕೊಡಲಿದ್ದಾರೆ.
ಸಿನಿವಾರ್ತೆ
ಈಗಾಗಲೇ ‘ಹೀರಾಮಂಡಿ’ ವೆಬ್ ಸೀರೀಸ್ ಮೂಲಕ ಹವಾ ಎಬ್ಬಿಸಿರುವ ಬಾಲಿವುಡ್ ನಟಿ ಹ್ಯೂಮಾ ಖುರೇಷಿ ಇದೀಗ ಯಶ್ ನಟನೆಯ ‘ಟಾಕ್ಸಿಕ್’ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.
ಟಾಕ್ಸಿಕ್ ಚಿತ್ರದ ಮುಖ್ಯಪಾತ್ರವೊಂದರಲ್ಲಿ ಹ್ಯೂಮಾ ನಟಿಸಲಿದ್ದಾರೆ ಎನ್ನಲಾಗಿದೆ. ಕರೀನಾ ಕಪೂರ್ ತೊರೆದ ಪಾತ್ರಕ್ಕೆ ಹ್ಯೂಮಾ ಬರುತ್ತಾರೆ ಎಂಬ ಗಾಳಿಸುದ್ದಿ ಇದ್ದರೂ, ಖಚಿತ ಮೂಲಗಳ ಪ್ರಕಾರ ಈಕೆ ನಾಯಕಿ ಪಾತ್ರದಲ್ಲಾಗಲೀ, ಯಶ್ ಸಹೋದರಿ ಪಾತ್ರದಲ್ಲಾಗಲೀ ನಟಿಸುತ್ತಿಲ್ಲ. ಬದಲಾಗಿ ಕಥೆಯ ಪ್ರತ್ಯೇಕ ಎಳೆಯಲ್ಲಿ ನಟಿಸುವ ಸಾಧ್ಯತೆ ಹೆಚ್ಚು.
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸದ್ಯ ಶೂಟಿಂಗ್ ಹಂತದಲ್ಲಿದ್ದು ಮುಂದಿನ ವರ್ಷ ಏಪ್ರಿಲ್ 10ಕ್ಕೆ ಬಿಡುಗಡೆಯಾಗಲಿದೆ.