ಸಾರಾಂಶ
ಮಾದೇವ ಸಿನಿಮಾದ ಪ್ರೇಮ ಗೀತೆ ಬಿಡುಗಡೆಯಾಗಿದೆ. ವಿನೋದ್ ಪ್ರಭಾಕರ್, ಸೋನಲ್ ಮೊಂತೆರೋ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ವಿನೋದ್ ಪ್ರಭಾಕರ್ ಹಾಗೂ ಸೋನಲ್ ಮೊಂತೆರೋ ನಟಿಸಿರುವ ‘ಮಾದೇವ’ ಸಿನಿಮಾದ ಪ್ರೇಮಗೀತೆ ಬಿಡುಗಡೆಯಾಗಿದೆ. ಎ2 ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಈ ಲಿರಿಕಲ್ ಹಾಡು ನೋಡಬಹುದು.
ಹಾಡಿನ ಬಿಡುಗಡೆ ವೇಳೆ ಮಾತನಾಡಿದ ವಿನೋದ್ ಪ್ರಭಾಕರ್, ‘ನನ್ನ ಕೆರಿಯರ್‌ನ ಬೆಸ್ಟ್ ಸಿನಿಮಾ ಇದು. ಡಿ-ಗ್ಲಾಮ್ ಪಾತ್ರ. ಬಹಳ ಹೋಮ್ ವರ್ಕ್ ಮಾಡಿದ್ದೇನೆ. ಆಂಗ್ರಿ ಯಂಗ್‌ಮ್ಯಾನ್ ಆಗಿ ನಟಿಸಿದ್ದೇನೆ. ಸಿನಿಮಾ ಗೆಲ್ಲುವ ವಿಶ್ವಾಸವಿದೆ’ ಎಂದಿದ್ದಾರೆ.ನಟಿ ಸೋನಲ್ ಮೊಂತೆರೋ, ‘ಹೃದಯಕ್ಕೆ ಹತ್ತಿರವಾದ ಸಿನಿಮಾ. ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ತೆರೆ ಮೇಲೆ ನನ್ನ ಮತ್ತು ವಿನೋದ್ ಕೆಮಿಸ್ಟ್ರಿಯನ್ನು ಬಹಳ ಮಂದಿ ಮೆಚ್ಚಿಕೊಂಡಿದ್ದಾರೆ’ ಎಂದರು.
ಅನನ್ಯಾ ಭಟ್ ಈ ಹಾಡು ಹಾಡಿದ್ದಾರೆ. ನವೀನ್ ರೆಡ್ಡಿ ಈ ಚಿತ್ರದ ನಿರ್ದೇಶಕ. ಆರ್ ಆರ್ ಕೇಶವ ದೇವಸಂದ್ರ ನಿರ್ಮಾಪಕರು.