ಸಾರಾಂಶ
ಬೆಂಗಳೂರಿನ ಮಳೆಗೆ ಸಪ್ತಮಿ ಗೌಡ ಫೋಟೋ ಶೂಟ್ ಮಾಡಿಸಿದ್ದಾರೆ. ಕಾಂತಾರ ಹುಡುಗಿಯ ಹಾಟ್ ಫೋಟೋಶೂಟ್‌ಗೆ ಬೆಂಗ್ಳೂರು ಪಡ್ಡೆಗಳು ಟೆಂಪರೇಚರ್ ಹೆಚ್ಚಿಸಿಕೊಂಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆತೆಲುಗಿನ ‘ತಮ್ಮುಡು’ ಸಿನಿಮಾ ಶೂಟಿಂಗ್ ಮುಗಿದ ಖುಷಿ, ಇನ್ನೊಂದೆಡೆ ಬೆಂಗಳೂರಿಗೆ ಮುಂಗಾರು ಮಳೆ ಬಿದ್ದ ಜೋಶ್.. ‘ಕಾಂತಾರ’ ಬೆಡಗಿ ಸಪ್ತಮಿ ಈ ನೆವದಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಮಳೆ ಬಿದ್ದು ಒದ್ದೆಯಾದ ರಸ್ತೆಯಲ್ಲಿ ನಿಂತು ಪಡ್ಡೆಗಳ ಮೈ ಬೆಚ್ಚಗಾಗಿಸೋ ತುಂಡು ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
‘ಮಳೆಗಾಲದಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಓಡಾಡೋದೆ ಬಹಳ ಜೋಶ್ ತರುವ ಸಂಗತಿ. ಫೋಟೋಶೂಟ್ ನೆವದಲ್ಲಿ ಬೆಂಗಳೂರಿನ ಒಂದಿಷ್ಟು ರಸ್ತೆಗಳಲ್ಲಿ ಓಡಾಡಿ ಖುಷಿ ಪಟ್ಟೆ’ ಎಂದಿದ್ದಾರೆ ಸಪ್ತಮಿ.