ನಟಿ ಪ್ರಣೀತಾ ಹಾಟ್‌ ಬಬಲ್‌ ಬಾತ್‌ ಮಾಡಿ ಅದರ ಪ್ರಯೋಜನಗಳ ಬಗ್ಗೆ ಹೇಳಿದ್ದಾರೆ.

 ಸಿನಿವಾರ್ತೆ : ಭಾರತೀಯ ಚಿತ್ರರಂಗದ ಅನೇಕ ನಟಿಯರು ಕೋಲ್ಡ್‌ ಬಾತ್‌ ವ್ಯಾಮೋಹಕ್ಕೆ ಬಿದ್ದರೆ, ‘ಜರಾಸಂಧ’ ಬೆಡಗಿ ಪ್ರಣೀತಾ ಸುಭಾಷ್‌ ಹಾಟ್‌ ಬಬಲ್‌ ಬಾತ್‌ ಅನ್ನೋ ಹೊಸ ಪ್ರಯೋಗ ಮಾಡಿ ಅದರ ಪ್ರಯೋಜನಗಳನ್ನು ಪಟ್ಟಿ ಮಾಡಿದ್ದಾರೆ. 

‘ಟೆನ್ಶನ್‌, ಜಂಜಾಟದ ನಡುವೆ ದೇಹ ಮನಸ್ಸು ರಿಲ್ಯಾಕ್ಸ್‌ ಆಗಬೇಕು ಅಂದರೆ ಹಾಟ್‌ ಬಬಲ್‌ ಬಾತ್‌ ಟ್ರೈ ಮಾಡಿ. ನಾನಂತೂ ಕಾಲದ ಪರಿವೆಯೇ ಇಲ್ಲದೇ ಹಾಟ್‌ ಬಬಲ್‌ ಜೊತೆ ಇದ್ದು ಬಿಡ್ತೀನಿ. ಅಷ್ಟರ ಮಟ್ಟಿಗೆ ಇದು ರಿಲ್ಯಾಕ್ಸಿಂಗ್‌ ಫೀಲ್ ನೀಡುತ್ತದೆ. 

ನಮ್ಮ ಸ್ನಾಯುಗಳನ್ನು, ಮನಸ್ಸನ್ನು ಬಹಳ ಆರಾಮಾಗಿ ಇರುವಂತೆ ಮಾಡುತ್ತದೆ’ ಎಂದಿದ್ದಾರೆ. ಇದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದೆ.