ಕೆಂಪೇಗೌಡ ಪಾತ್ರದಲ್ಲಿ ಡಾಲಿ ಧನಂಜಯ್

| Published : Jun 22 2024, 12:50 AM IST / Updated: Jun 22 2024, 04:43 AM IST

ಕೆಂಪೇಗೌಡ ಪಾತ್ರದಲ್ಲಿ ಡಾಲಿ ಧನಂಜಯ್
Share this Article
  • FB
  • TW
  • Linkdin
  • Email

ಸಾರಾಂಶ

ಟಿ ಎಸ್ ನಾಗಾಭರಣ, ಧನಂಜಯ್ ಕಾಂಬಿನೇಶನ್ ನಲ್ಲಿ ನಾಡಪ್ರಭು ಕೆಂಪೇಗೌಡ ಸಿನಿಮಾ ಶುರುವಾಗಿದೆ.

 ಸಿನಿವಾರ್ತೆ

‘ಅಲ್ಲಮ’ ಸಿನಿಮಾ ಬಳಿಕ ಟಿಎಸ್‌ ನಾಗಾಭರಣ ಹಾಗೂ ಡಾಲಿ ಧನಂಜಯ್‌ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಜತೆಯಾಗಿದ್ದಾರೆ. ಈ ಜೋಡಿಯ ಸಿನಿಮಾ ಹೆಸರು ‘ನಾಡಪ್ರಭು ಕೆಂಪೇಗೌಡ’.

ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಜೀವನ ಪುಟಗಳನ್ನು ಆಧರಿಸಿದ ಚಾರಿತ್ರಿಕ ಸಿನಿಮಾ ಇದು. ನಾಯಕನಾಗಿ ಧನಂಜಯ್‌ ಆಯ್ಕೆ ಆಗಿದ್ದು, ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಆಗಿದೆ. ಡಾ. ಎಂ.ಎನ್‌. ಶಿವರುದ್ರಪ್ಪ ಹಾಗೂ ಶುಭಂ ಗುಂಡಲ‌ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಾಹಣ ಮಾಡಲಿದ್ದಾರೆ. ಪ್ರತಿಭಾ ನಂದಕುಮಾರ್‌ ಚಿತ್ರಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ.