ಇಂದೇ ರಿಲೀಸ್‌: ಚಿಲ್ಲಿ ಚಿಕನ್‌

| Published : Jun 21 2024, 01:07 AM IST / Updated: Jun 21 2024, 05:13 AM IST

ಸಾರಾಂಶ

ಚಿಲ್ಲಿ ಚಿಕನ್‌ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ

ರಂಗಭೂಮಿ ಹಿನ್ನೆಲೆಯ ಶೃಂಗ ಬಿ ವಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ‘ಚಿಲ್ಲಿ ಚಿಕನ್‌’ ಇಂದು ತೆರೆಗೆ ಬರುತ್ತಿದೆ. ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ನಿರ್ಮಾಣದಲ್ಲಿ ಕೇರಳ ಮೂಲದ ಪ್ರತೀಕ್ ಪ್ರಜೋಶ್ ಈ ಸಿನಿಮಾ ನಿರ್ದೇಶಿಸಿದ್ದಾರೆ.

 ಥ್ರಿಲ್ಲರ್ ಕಥಾಹಂದರದ ಈ ಸಿನಿಮಾವನ್ನು ನೈಜ ಘಟನೆ ಆಧರಿಸಿ ನಿರ್ಮಿಸಲಾಗಿದೆ.ಉತ್ತರ ಭಾರತದಿಂದ ಬೆಂಗಳೂರಿಗೆ ಬಂದ ಐವರು ಹುಡುಗರು ಚೈನೀಸ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತ, ಸ್ವಂತ ಹೋಟೆಲ್ ತೆರೆಯಲು ಮುಂದಾಗುತ್ತಾರೆ. 

ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಇವರು ಹೋಟೆಲ್ ಮಾಡುತ್ತಾರಾ ಎಂಬುದು ಚಿತ್ರದ ಕಥಾಹಂದರ.ಕರ್ನಾಟಕ, ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ, ವಿಕ್ಟರ್ ತೌಡಮ್, ಜಿಂಪಾ ಭುಟಿಯಾ, ಟಾಮ್‍ಥಿನ್ ಥೋಕ್‍ ಚೋಮ್, ಹಿರಾಕ್ ಸೋನೊವಾಲ್ ಅಭಿನಯಿಸಿದ್ದಾರೆ.