ಫರ್ಹಾನ್‌ ಅಖ್ತರ್‌ ನಿರ್ದೇಶನದ ‘ಡಾನ್‌ 3’ ಸಿನಿಮಾದಿಂದ ಹಿಂದೆ ಸರಿದಿರುವ ‘ಧುರಂಧರ್‌’ ಖ್ಯಾತಿಯ ನಟ ರಣವೀರ್‌ ಸಿಂಗ್‌ ಇದೀಗ ತಾನು ಪಡೆದಿದ್ದ ಅಡ್ವಾನ್ಸ್‌ ಮೊತ್ತ ರು. 10 ಕೋಟಿಯನ್ನು ವಾಪಾಸ್‌ ನೀಡಿದ್ದಾರೆ. ಅಮೀರ್‌ ಖಾನ್‌ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾತುಕತೆ ನಡೆದಿತ್ತು.

 ಸಿನಿವಾರ್ತೆ

ಚಿತ್ರಕಥೆಯ ಕಾರಣಕ್ಕೆ ರಣವೀರ್‌ ಹಾಗೂ ಫರ್ಹಾನ್‌ ನಡುವೆ ಭಿನ್ನಾಭಿಪ್ರಾಯ

ಚಿತ್ರಕಥೆಯ ಕಾರಣಕ್ಕೆ ರಣವೀರ್‌ ಹಾಗೂ ಫರ್ಹಾನ್‌ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆಗ ರಣವೀರ್‌ ಸಿನಿಮಾದಿಂದ ಆಚೆ ಬಂದರು. ಈಗಾಗಲೇ ಸಿನಿಮಾದ ಪ್ರಿಪ್ರೊಡಕ್ಷನ್‌ ಕೆಲಸ ನಡೆದಿರುವ ಕಾರಣ, ರಣವೀರ್‌ ನಿಲುವಿನಿಂದ ತನಗೆ ವಿಪರೀತ ನಷ್ಟವಾಗಿದೆ. ಅವರು ರೂ.40 ಕೋಟಿ ಪರಿಹಾರ ನೀಡಬೇಕು ಎಂದು ಪರ್ಹಾನ್‌ ಪಟ್ಟು ಹಿಡಿದಿದ್ದರು. ಅಮೀರ್‌ ಖಾನ್‌ ಮಧ್ಯಸ್ಥಿಕೆಯಲ್ಲಿ ಸಂಧಾನ ಯಶಸ್ವಿಯಾಗಿದೆ. ತನ್ನ ಮುಂದಿನ ಸಿನಿಮಾಕ್ಕೂ ಫರ್ಹಾನ್‌ ಅವರನ್ನು ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳುವ ಇಂಗಿತವನ್ನು ರಣವೀರ್‌ ವ್ಯಕ್ತಪಡಿಸಿದ್ದಾರೆ.