ಸಿನಿವಾರ್ತೆ

ಸಾಹಸ ಪ್ರಧಾನ ‘ಟಾಕ್ಸಿಕ್‌’ ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಯಶ್‌ ಮಾತನಾಡಿದ್ದಾರೆ. ಜೆ.ಜೆ ಪೆರ್ರಿ ಅವರಿಂದ ಸಾಹಸ ನಿರ್ದೇಶನ ಮಾಡಿಸಿರುವುದಕ್ಕೂ ಕಾರಣ ತಿಳಿಸಿದ್ದಾರೆ. ಜೂ.4ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದ್ದು, ಈ ಸಿನಿಮಾ ಆ್ಯಕ್ಷನ್‌ ಬಗ್ಗೆ ಯಶ್‌ ಮಾತು ಹೀಗಿದೆ:

ಗನ್‌ಫೂ ಅನ್ನುವ ಹೊಸ ಸಾಹಸ

1. ಇದರಲ್ಲಿ ನಾವು ಗನ್‌ಫೂ ಅನ್ನುವ ಹೊಸ ಸಾಹಸವನ್ನು ಪರಿಚಯಿಸಿದ್ದೇವೆ. ನೀವು ಕುಂಗ್‌ಫೂ ಫೈಟ್‌ ಬಗ್ಗೆ ಕೇಳಿರಬಹುದು. ಇದು ಗನ್‌ ಮೂಲಕ ಕುಂಗ್‌ಫೂ ರೀತಿ ಮಾಡುವ ಆ್ಯಕ್ಷನ್‌. ಇದು ಆ್ಯಕ್ಷನ್ ಅನ್ನು ನೆಕ್ಸ್ಟ್‌ ಲೆವೆಲ್‌ಗೆ ಕೊಂಡೊಯ್ಯುವ ಪ್ರಯತ್ನ.

2. ಆ್ಯಕ್ಷನ್‌ ಅದ್ಭುತವಾಗಿ ಬರಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಜೆ.ಜೆ ಪೆರ್ರಿ ಎಂಬ ಅದ್ಭುತ ಆ್ಯಕ್ಷನ್‌ ಡೈರೆಕ್ಟರ್‌ ಅನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದೆ. ಆ ಹೊತ್ತಿನಲ್ಲಿ ಅವರು ನನ್ನ ಬಾಡಿ ಲ್ಯಾಂಗ್ವೇಜ್‌ ಅನ್ನು ಗಮನಿಸಿ ಅದಕ್ಕೆ ತಕ್ಕ ಹಾಗೆ ಆಕ್ಷನ್‌ ಸೀಕ್ವೆನ್ಸ್‌ಗಳನ್ನು ಕಟ್ಟತೊಡಗಿದರು. ಅದು ಸಿನಿಮಾಕ್ಕೆ ಬೇರೆಯದೇ ಆಯಾಮ ನೀಡಿದೆ. ಆದರೆ ಎಲ್ಲಾ ಆ್ಯಕ್ಷನ್‌ ಕಥೆಯ ಹೊರಗೆ ನಿಲ್ಲದೇ ಕಥೆಗೆ ಪೂರಕವಾಗಿ ಚಲಿಸುತ್ತದೆ.


3. ಜೊತೆಗೆ ಗ್ಯಾಂಗ್‌ಸ್ಟರ್‌ ಸಿನಿಮಾಕ್ಕೆ ಈ ಸಿನಿಮಾ ಮೂಲಕ ನಿರ್ದೇಶಕಿ ಗೀತು ಮೋಹನ್‌ದಾಸ್‌ ಹೊಸ ಆಯಾಮ ನೀಡಿದ್ದಾರೆ. ಮನುಷ್ಯನ ಕ್ರೌರ್ಯವನ್ನು ಅನೇಕ ಲೇಯರ್‌ಗಳಲ್ಲಿ ಎಮೋಶನಲ್‌ ಲೆವೆಲ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ.