ಏಪ್ರಿಲ್ 21ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿಕೊಟ್ಟು ಎರಡು ದಶಕವಾಗಿದೆ. ‘ಚೆಲ್ಲಾಟ’ ಸಿನಿಮಾದಿಂದ ‘ಕೃಷ್ಣಂ ಪ್ರಣಯ ಸಖಿ’ವರೆಗೆ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಸಿನಿವಾರ್ತೆ
ಏಪ್ರಿಲ್ 21ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿಕೊಟ್ಟು ಎರಡು ದಶಕವಾಗಿದೆ. ‘ಚೆಲ್ಲಾಟ’ ಸಿನಿಮಾದಿಂದ ‘ಕೃಷ್ಣಂ ಪ್ರಣಯ ಸಖಿ’ವರೆಗೆ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಖುಷಿ ಹಂಚಿಕೊಂಡಿರುವ ಗಣೇಶ್
ತನ್ನ ಎಕ್ಸ್ ಖಾತೆಯಲ್ಲಿ ಖುಷಿ ಹಂಚಿಕೊಂಡಿರುವ ಗಣೇಶ್, ‘ನನ್ನ ಬದುಕಿನಲ್ಲಿ ಇದು ಮಹತ್ವದ ಮೈಲಿಗಲ್ಲು. ಮೊದಲ ಸಿನಿಮಾ ‘ಚೆಲ್ಲಾಟ’ದಿಂದ ಕನಸುಗಳಿಗೆ ರೆಕ್ಕೆ ಮೂಡಿತು. ಸಣ್ಣ ಆರಂಭದಿಂದ, ನೀವಿಂದು ಪ್ರೀತಿಯಿಂದ ‘ಗೋಲ್ಡನ್ ಸ್ಟಾರ್’ ಅಂತ ಕರೆಯುವವರೆಗೆ ಈ ಜರ್ನಿಯೇ ಒಂದು ಅದ್ಭುತ.
ನೀವೇ ನನ್ನ ಬಲ, ನನ್ನ ಉಸಿರು
ಇದಕ್ಕೆಲ್ಲಾ ಶಕ್ತಿ ತುಂಬಿದ್ದು ಅಭಿಮಾನಿಗಳಾದ ನೀವು. ನೀವೇ ನನ್ನ ಬಲ, ನನ್ನ ಉಸಿರು. ಕನ್ನಡಿಗರು ಸಿನಿಮಾದ ಪ್ರತಿ ಫ್ರೇಮ್ ಅನ್ನೂ ಹಬ್ಬದ ತರ ಸೆಲೆಬ್ರೇಟ್ ಮಾಡಿದ್ದೀರಿ. ಸಿನಿಮಾ ಇಂಡಸ್ಟ್ರಿ ನನ್ನನ್ನ ನಂಬಿ, ಈ ಸ್ಥಾನ ಕೊಟ್ಟಿದೆ.
ನಿಮಗೆಲ್ಲ ಹೃದಯಾಂತರಾಳದ ಕೃತಜ್ಞತೆ. ನೀವು ಹಾಕೋ ಪ್ರತಿ ಸೀಟಿ, ಚಪ್ಪಾಳೆ, ಆ ಪ್ರೀತಿಯ ಕಣ್ಣೀರು.. ಎಲ್ಲವನ್ನೂ ನಾನು ಅನುಭವಿಸುತ್ತಿದ್ದೇನೆ, ಹೆಮ್ಮೆಯಿಂದ ನನ್ನ ಜೊತೆ ಇಟ್ಟುಕೊಳ್ಳುತ್ತೇನೆ. ಇದು ಕೇವಲ ಆರಂಭ ಅಷ್ಟೇ. ಇನ್ನು ಮುಂದೆ ಡಬಲ್ ಜೋಶ್‌ನಲ್ಲಿ ನಿಮ್ಮ ಹೃದಯಕ್ಕೆ ಲಗ್ಗೆ ಇಡುತ್ತೇನೆ’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.