ಮೈಸೂರು ನಗರದ ದೇವಗೀತಾ ನಿವಾಸದಲ್ಲಿ ಶನಿವಾರ ಬೆಳಗ್ಗೆ ಶಾಸಕ, ಮಾಜಿ ಸಚಿವರಿಗೆ ದೊಡ್ಡ ಗಾತ್ರದ ಗುಲಾಬಿ ಹೂವಿನ ಹಾರ ಹಾಗೂ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಸನ್ಮಾನಿಸಿ, ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ಮೂರು ದಿನಗಳ ಹಿಂದೆ ನಡೆದ ಗುಂಡ್ಲುಪೇಟೆ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಜಯಗಳಿಸಿದ ನೂತನ ನಿರ್ದೇಶಕರು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ರನ್ನು ಸನ್ಮಾನಿಸಿದರು.ಮೈಸೂರು ನಗರದ ದೇವಗೀತಾ ನಿವಾಸದಲ್ಲಿ ಶನಿವಾರ ಬೆಳಗ್ಗೆ ಶಾಸಕ, ಮಾಜಿ ಸಚಿವರಿಗೆ ದೊಡ್ಡ ಗಾತ್ರದ ಗುಲಾಬಿ ಹೂವಿನ ಹಾರ ಹಾಗೂ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಸನ್ಮಾನಿಸಿ, ಅಭಿನಂದಿಸಿದರು.
ನೂತನ ನಿರ್ದೇಶಕರಾದ ರಮೇಶ್, ಮಂಜುನಾಥ್, ಚಂದ್ರಶೇಖರ್, ವೆಂಕಟೇಶ್, ಶಿವಣ್ಣ, ವಿ.ಬಿ.ಶಿವನಾಗಪ್ಪ, ಮಧು, ಹೊನ್ನಪ್ಪ, ರಘು, ಚಿಕ್ಕಣ್ಣ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.