ರವಿಚಂದ್ರನ್ ನಟನೆಯ ದಿ ಜಡ್ಜ್‌ಮೆಂಟ್‌ ಇಂದು ಬಿಡುಗಡೆಯಾಗಲಿದೆ.

ತಂದೆ ಮಗನ ಎಮೋಶನಲ್‌ ಬಾಂಡಿಂಗ್‌ ಜೊತೆ ಕೋರ್ಟ್‌ ರೂಂ ಸನ್ನಿವೇಶಗಳೂ ಇರುವ ಲೀಗಲ್‌ ಥ್ರಿಲ್ಲರ್‌ ‘ದಿ ಜಡ್ಜ್‌ಮೆಂಟ್‌’ ಇಂದು ಬಿಡುಗಡೆಯಾಗಲಿದೆ. ರವಿಚಂದ್ರನ್‌, ದಿಗಂತ್‌, ಧನ್ಯಾ ರಾಮ್‌ಕುಮಾರ್‌, ಲಕ್ಷ್ಮೀ ಗೋಪಾಲಸ್ವಾಮಿ, ಮೇಘನಾ ಗಾಂವ್ಕರ್‌ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. 

ಕರಿಕೋಟು ತೊಟ್ಟು ವಕೀಲನ ಪಾತ್ರದಲ್ಲಿ ರವಿಚಂದ್ರನ್‌ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಹಾಗೂ ನಿರ್ಮಾಪಕ ಗುರುರಾಜ್‌ ಕುಲಕರ್ಣಿ, ‘ಇದೊಂದು ಅತ್ಯುತ್ತಮ ಲೀಗಲ್‌ ಥ್ರಿಲ್ಲರ್‌. ಇಡೀ ಕುಟುಂಬ ಒಟ್ಟಾಗಿ ಮುಜುಗರವಿಲ್ಲದೇ ನೋಡುವ ಚಿತ್ರ. ಕಥೆಯ ನಿರ್ವಹಣೆಯಲ್ಲಿ ಹೊಸತನವಿದೆ. ಎರಡು ಕುಟುಂಬಗಳ ತಾಕಲಾಟ, ಕೋರ್ಟ್‌, ಕೊಲೆ, ರಾಜಕೀಯ.. ಹೀಗೆ ಸಿನಿಮಾ ಕಥೆ ಇದೆ. ಸಂಬಂಧಗಳ ಬಗ್ಗೆಯೂ ಚಿತ್ರ ಮಾತಾಡುತ್ತೆ’ ಎಂದಿದ್ದಾರೆ.