ಇಂದೇ ರಿಲೀಸ್‌ : ಎವಿಡೆನ್ಸ್‌

| Published : May 24 2024, 12:47 AM IST / Updated: May 24 2024, 06:27 AM IST

ಸಾರಾಂಶ

ಇನ್‌ವೆಸ್ಟಿಗೇಟಿವ್‌ ಕಥಾಹಂದರದ ಎವಿಡೆನ್ಸ್‌ ಸಿನಿಮಾ ಇಂದು ಬಿಡುಗಡೆ

ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮ ಕಥಾಹಂದರ ಇರುವ ‘ಎವಿಡೆನ್ಸ್’ ಸಿನಿಮಾ ಇಂದು ತೆರೆ ಕಾಣುತ್ತಿದೆ.ಪ್ರವೀಣ್ ಸಿ ಪಿ ನಿರ್ದೇಶಕರು. ಶ್ರೀನಿವಾಸ್‌ ಪ್ರಭು, ಕೆ.ಮಾದೇಶ್, ನಟರಾಜ್ ಸಿ.ಎಸ್ ನಿರ್ಮಾಣವಿದೆ.

ರೋಬೊ ಗಣೇಶನ್ ನಾಯಕ. ನಟಿ ಮಾನಸ ಜೋಶಿ ಇಂಟರಾಗೇಶನ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ‘ತನಿಖೆಯ ಜಾಡಿನಲ್ಲಿ ಸಾಗುವ ಸಿನಿಮಾದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವೂ ಇದೆ’ ಎಂದು ನಿರ್ದೇಶಕ ಪ್ರವೀಣ್‌ ಹೇಳಿದ್ದಾರೆ.