ಜಗತ್ತಿನ ಹಲವರನ್ನು ಕಾಡುತ್ತಿರುವ ಪಿಟಿಎಸ್‌ಡಿ ಅಥವಾ ಪೋಸ್ಟ್ ಟ್ರಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ಕುರಿತ ಕಥಾಹಂದರದ ಚಿತ್ರ ‘ವಿಕಲ್ಪ’. ಐಟಿ ಕಂಪನಿಯೊಂದರ ಎಂಡಿ ಆಗಿರುವ ಪೃಥ್ವಿರಾಜ್ ಪಾಟೀಲ್ ಈ ಸಿನಿಮಾ ನಿರ್ದೇಶಿಸಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ಸಿನಿವಾರ್ತೆ

ವಾಸ್ತವ ಹಾಗೂ ಕಲ್ಪನೆಯ ನಡುವಿನ ಸ್ಥಿತಿಯೇ ವಿಕಲ್ಪ
ಸಿನಿಮಾ ಬಗ್ಗೆ ವಿವರ ನೀಡಿದ ಅವರು, ‘ವಾಸ್ತವ ಹಾಗೂ ಕಲ್ಪನೆಯ ನಡುವಿನ ಸ್ಥಿತಿಯೇ ವಿಕಲ್ಪ. ಪಿಟಿಎಸ್‌ಡಿ ಸಮಸ್ಯೆ ಜೊತೆಗೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಿದ್ದೇವೆ. ಸಿನಿಮಾದ ಮೊದಲ ಭಾಗ ಕಾಮಿಡಿಗೆ ಮೀಸಲು. ಎರಡನೇ ಭಾಗದಲ್ಲಿ ಕಥೆ ತೀವ್ರವಾಗುತ್ತದೆ. ಉತ್ತರ ಕನ್ನಡದ ಬದುಕಿನ ಚಿತ್ರಣವೂ ಸಿನಿಮಾದಲ್ಲಿ ಸಿಗುತ್ತದೆ’ ಎಂದರು.
ಸಿನಿಮಾದ ಟೀಸರ್ ಭರವಸೆ ಮೂಡಿಸಿದೆ - ಜೋಗಿ
ಕನ್ನಡಪ್ರಭ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ, ‘ಈ ಸಿನಿಮಾದ ಟೀಸರ್ ಭರವಸೆ ಮೂಡಿಸಿದೆ. ಸಿನಿಮಾ ರಂಗದಲ್ಲಿ ಚಿತ್ರ ಮಾಡಿ ಬೆಳೆಯುವವರು, ವಿಮರ್ಶೆ ಬರೆದು ಅಳೆಯುವವರು ಇಬ್ಬರೂ ಮುಖ್ಯವಾಗುತ್ತಾರೆ. ಆದರೆ ಇತ್ತೀಚೆಗೆ ವಿಮರ್ಶೆಯನ್ನೇ ಹತ್ತಿಕ್ಕುವ ಪ್ರಯತ್ನವಾಗುತ್ತಿರುವುದಕ್ಕೆ ವಿರೋಧವಿದೆ’ ಎಂದರು.
ನಟಿ ಹರಿಣಿ ಶ್ರೀಕಾಂತ್ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ನಟಿಸಿದ್ದಾರೆ. ನಾಗಶ್ರೀ ಹೆಬ್ಬಾರ್ ನಾಯಕಿ. ಸಂವತ್ಸರ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂದಿರಾ ಶಿವಸ್ವಾಮಿ ನಿರ್ಮಾಪಕರು.