ಯಶ್ ಅವರ ‘ಟಾಕ್ಸಿಕ್’ ಚಿತ್ರದ ಮತ್ತೊಬ್ಬ ನಟಿಯ ಫಸ್ಟ್ ಲುಕ್ ಬಿಡುಗಡೆ ಆಗಿದೆ. ರೆಬೆಕಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ತಾರಾ ಸುತಾರಿಯಾ ಅವರ ಲುಕ್ ಇದ್ದಾಗಿದ್ದು, ಸ್ವತಃ ನಟ ಯಶ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ
ಸಿನಿವಾರ್ತೆ
ಯಶ್ ಅವರ ‘ಟಾಕ್ಸಿಕ್’ ಚಿತ್ರದ ಮತ್ತೊಬ್ಬ ನಟಿಯ ಫಸ್ಟ್ ಲುಕ್ ಬಿಡುಗಡೆ ಆಗಿದೆ. ರೆಬೆಕಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ತಾರಾ ಸುತಾರಿಯಾ ಅವರ ಲುಕ್ ಇದ್ದಾಗಿದ್ದು, ಸ್ವತಃ ನಟ ಯಶ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.
ಹಾಲಿವುಡ್ ನಟಿಯಂತೆ ಕಾಣುತ್ತಿದ್ದ ತಾರಾ ಸುತಾರಿಯಾ
ಪೋಸ್ಟರ್ನಲ್ಲಿ ಹಾಲಿವುಡ್ ನಟಿಯಂತೆ ತಾರಾ ಸುತಾರಿಯಾ ಕಾಣುತ್ತಿದ್ದು, ಕುತೂಲ ಮೂಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಹಿಂದಿಯೇತರ ಚಿತ್ರದಲ್ಲಿ
ಬಾಲಿವುಡ್ ನಟಿ ತಾರಾ ಸುತಾರಿಯಾ ಇದೇ ಮೊದಲ ಬಾರಿಗೆ ಹಿಂದಿಯೇತರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕರಣ್ ಜೋಹರ್ ನಿರ್ಮಾಣದ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಮೂಲಕ ನಟನೆಗೆ ಪ್ರವೇಶಿಸಿದ ತಾರಾ ಸುತಾರಿಯಾ ‘ತಡಪ್’, ಟೈಗರ್ ಶ್ರಾಫ್ ಜೊತೆಗೆ ‘ಹೀರೊಪಂತಿ 2’, ಅರ್ಜುನ್ ಕಪೂರ್ ಜೊತೆಗೆ ‘ಏಕ್ ವಿಲನ್ ರಿಟರ್ನ್ಸ್’ ಹಾಗೂ ‘ಅಪೂರ್ವ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ತಾರಾ ಸುತಾರಿಯಾ ಅವರ ಏಳನೇ ಚಿತ್ರ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿನ್ ಪ್ರೊಡಕ್ಷನ್ ನಿರ್ಮಿಸುತ್ತಿದೆ.


