‘ತಮಿಳಿನ ಮಾಸ್ಟರ್‌ ಸಿನಿಮಾ ಬಳಿಕ ನನಗೆ ಪ್ರಶಾಂತ್‌ ನೀಲ್‌ ಅವರ ಕಡೆಯಿಂದ ಕರೆ ಬಂತು. ಪ್ರಭಾಸ್‌ ಅವರ ಸಲಾರ್‌ ಸಿನಿಮಾದ ನಾಯಕಿ ಪಾತ್ರಕ್ಕಾಗಿ ನನ್ನನ್ನು ಬೆಂಗಳೂರಿಗೆ ಕರೆಸಿದರು. ನೀಲ್‌ ಅವರೇ ಖುದ್ದಾಗಿ ನನ್ನ ಫೋಟೋ ತೆಗೆದುಕೊಂಡರು.

 ಸಿನಿವಾರ್ತೆ

‘ತಮಿಳಿನ ಮಾಸ್ಟರ್‌ ಸಿನಿಮಾ ಬಳಿಕ ನನಗೆ ಪ್ರಶಾಂತ್‌ ನೀಲ್‌ ಅವರ ಕಡೆಯಿಂದ ಕರೆ ಬಂತು. ಪ್ರಭಾಸ್‌ ಅವರ ಸಲಾರ್‌ ಸಿನಿಮಾದ ನಾಯಕಿ ಪಾತ್ರಕ್ಕಾಗಿ ನನ್ನನ್ನು ಬೆಂಗಳೂರಿಗೆ ಕರೆಸಿದರು. ನೀಲ್‌ ಅವರೇ ಖುದ್ದಾಗಿ ನನ್ನ ಫೋಟೋ ತೆಗೆದುಕೊಂಡರು. ಭಾರತೀಯ ಉಡುಗೆಯಲ್ಲಿ, ವೆಸ್ಟರ್ನ್‌ ಡ್ರೆಸ್‌ನಲ್ಲಿ ಹೇಗೆ ಕಾಣುತ್ತೀನಿ ಎಂದೆಲ್ಲ ಲುಕ್‌ ಟೆಸ್ಟ್ ಮಾಡಿದರು. ಇಷ್ಟೆಲ್ಲ ಮಾಡಿ ಕೊನೆಗೆ ಈ ಪಾತ್ರಕ್ಕೆ ಬೇರೆ ನಟಿಯನ್ನು ಹಾಕಿಕೊಂಡರು. ಆಗ ಬಹಳ ಬೇಸರವಾಗಿತ್ತು.’

ಹೀಗೆ ಹೇಳಿದ್ದು ಬಹು ಭಾಷಾ ನಟಿ ಮಾಲವಿಕಾ ಮೋಹನನ್‌.

ಪ್ರಭಾಸ್‌ ಸಿನಿಮಾದಲ್ಲಿ ನಟಿಸುವಿರಾ ಎಂದು ಕೇಳಿದರು

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಇದಾಗಿ ಐದಾರು ತಿಂಗಳಲ್ಲೇ ಮತ್ತೆ ಕರೆಬಂತು, ಪ್ರಭಾಸ್‌ ಸಿನಿಮಾದಲ್ಲಿ ನಟಿಸುವಿರಾ ಎಂದು ಕೇಳಿದರು. ಇಲ್ಲ, ಬೇರೆ ನಟಿಯ ಆಯ್ಕೆ ಆಗಿರಬೇಕು ನೋಡಿ ಎಂದಿದ್ದೆ. ಅವರು ನಾವು ಬೇರೆ ಸಿನಿಮಾಕ್ಕಾಗಿ ಕೇಳುತ್ತಿದ್ದೇವೆ ಎಂದರು. ನಾನು ಖುಷಿಯಿಂದ ಒಪ್ಪಿಕೊಂಡೆ. ಅದುವೇ ರಾಜಾಸಾಬ್‌ ಸಿನಿಮಾದ ಭೈರವಿ ಪಾತ್ರ’ ಎಂದೂ ಹೇಳಿದ್ದಾರೆ.

ಪ್ರಭಾಸ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ದಿ ರಾಜಾ ಸಾಬ್‌’ ಜನವರಿ 9ರಂದು ಬಿಡುಗಡೆಯಾಗಲಿದೆ.