ಸಲಾರ್ ಸಿನಿಮಾ ಪೈರಸಿ. ಈ ಅಕ್ರಮ ತಡೆಯಲು ಮುಂದಾದ ಹೊಂಬಾಳೆ ಫಿಲಂಸ್‌.

ಕನ್ನಡಪ್ರಭ ಸಿನಿವಾರ್ತೆ

ಜಗತ್ತಿನಾದ್ಯಂತ ಸುಮಾರು 7000 ಸ್ಕ್ರೀನ್‌ಗಳಲ್ಲಿ ಅಬ್ಬರಿಸುತ್ತಿರುವ ‘ಸಲಾರ್‌’ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಇದರ ವಿರುದ್ಧ ದನಿ ಎತ್ತಿರುವ ಚಿತ್ರತಂಡ ‘ಸಲಾರ್ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲೇ ನೋಡಿ. ಪೈರಸಿ ಲಿಂಕ್ ಕಂಡರೆ ಟ್ವಿಟರ್ ಖಾತೆ @blockxtechs ಅಥವಾ @blockxtech.com ಖಾತೆಗೆ ರಿಪೋರ್ಟ್ ಮಾಡಿ’ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದೆ. ಇದಕ್ಕೆ ಚಿತ್ರಪ್ರೇಮಿಗಳಿಂದ ಬೆಂಬಲ ವ್ಯಕ್ತವಾಗಿದೆ.

ಈ ಮಧ್ಯೆ ಆನ್‌ಲೈನ್‌ನಲ್ಲಿ ಸಲಾರ್‌ ಚಿತ್ರ ಲೀಕ್‌ ಆಗಿದ್ದು, ತಕ್ಷಣವೇ ಆ ಲಿಂಕ್ ಅನ್ನು ತೆಗೆಯಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೊಂಬಾಳೆ ಫಿಲಂಸ್‌ ಪ್ರತಿಕ್ರಿಯೆ ನೀಡಿಲ್ಲ.