ಪುನೀತ್ ರಾಜ್‌ಕುಮಾರ್ ನಟನೆಯ ‘ಆಕಾಶ್’ ಸಿನಿಮಾ ತೆರೆಕಂಡು 20 ವರ್ಷಗಳಾಗಿವೆ. 200 ದಿನಗಳ ಪ್ರದರ್ಶನ ಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಸಿನಿಮಾ ಇದೀಗ ಪುನೀತ್ ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಮಾರ್ಚ್ 13ರಂದು ಮರು ಬಿಡುಗಡೆಯಾಗಲಿದೆ.
ಸಿನಿವಾರ್ತೆ : ಪುನೀತ್ ರಾಜ್‌ಕುಮಾರ್ ನಟನೆಯ ‘ಆಕಾಶ್’ ಸಿನಿಮಾ ತೆರೆಕಂಡು 20 ವರ್ಷಗಳಾಗಿವೆ. 200 ದಿನಗಳ ಪ್ರದರ್ಶನ ಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಸಿನಿಮಾ ಇದೀಗ ಪುನೀತ್ ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಮಾರ್ಚ್ 13ರಂದು ಮರು ಬಿಡುಗಡೆಯಾಗಲಿದೆ.
ಮಾರ್ಚ್ 17ರ ಅಪ್ಪು ಬರ್ತ್‌ಡೇ ಒಂದು ವಾರ ಮೊದಲು ಬಿಡುಗಡೆ
ಮಾರ್ಚ್ 17ರ ಅಪ್ಪು ಬರ್ತ್‌ಡೇಗೂ ಒಂದು ವಾರ ಮೊದಲು ಅವರ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾವನ್ನು ಥೇಟರಿನಲ್ಲಿ ನೋಡಿ ಆನಂದಿಸಬಹುದು.
ಈ ವಿಚಾರವನ್ನು ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್
ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ವಿಚಾರವನ್ನು ಹಂಚಿಕೊಂಡು, ‘ನೀನೆ ನೀನೆ ನನಗೆಲ್ಲ ನೀನೆ.. ಮಾತು ನೀನೆ ಮನಸೆಲ್ಲಾ ನೀನೆ ಎಂಬ ಮನಮೋಹಕ ಹಾಡನ್ನು, ಎಂದೂ ಮಾಸದ ಚಿತ್ರವಾಗಿ ಉಳಿದಿರುವ ಆಕಾಶ್ ಸಿನಿಮಾವನ್ನು ಮತ್ತೆ ಥೇಟರ್‌ನಲ್ಲಿ ನೋಡಿ ಆನಂದಿಸಿ. ಡಾ.ಪುನೀತ್ ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಈ ಸಿನಿಮಾ ಮತ್ತೆ ಚಿತ್ರಮಂದಿರಕ್ಕೆ ಬರಲಿದೆ’ ಎಂದಿದ್ದಾರೆ.

