2025 ಕ್ಯಾಲೆಂಡರ್‌ನ ಕೊನೆಯ ಹಾಳೆ ಹರಿಯುವ ದಿನ ಸಮೀಪಿಸುತ್ತಿದ್ದಂತೇ ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿ ಸ್ಯಾಂಡಲ್‌ವುಡ್ ಕಳೆಗಟ್ಟುತ್ತಿದೆ. ಡಿಸೆಂಬರ್ ಮಾಸದಲ್ಲಿ ಬಿಡುಗಡೆಯಾದ ಮೂರು ಸ್ಟಾರ್ ಸಿನಿಮಾಗಳು ಚಿತ್ರರಂಗಕ್ಕೆ ತಕ್ಕಮಟ್ಟಿನ ಚೈತನ್ಯ ತಂದಿವೆ.

‘ಡೆವಿಲ್’ ಸಿನಿಮಾ ಕೆಲವೊಂದು ಥೇಟರ್‌ಗಳಲ್ಲಿ ಪ್ರದರ್ಶನ
ಡಿ.12ರಂದು ರಿಲೀಸ್ ಆದ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕೆಲವೊಂದು ಥೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದರೆ, ಗುರುವಾರ ಬಿಡುಗಡೆಯಾದ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ, ಕಿಚ್ಚ ಸುದೀಪ್ ಅಭಿನಯದ ‘45’ ಸಿನಿಮಾಗಳು ಬಹುತೇಕ ಚಿತ್ರಮಂದಿರಗಳು ಭರ್ತಿ ಆಗುವಂತೆ ಮಾಡಿದವು.
ರೇಟಿಂಗ್‌ಗೆ ಕೊಕ್
ಸಿನಿಮಾ ಬಗೆಗಿನ ಅಪಪ್ರಚಾರ ತಡೆಯುವ ನಿಟ್ಟಿನಲ್ಲಿ ಬುಕ್ ಮೈ ಶೋದಲ್ಲಿ ರೇಟಿಂಗ್, ಕಾಮೆಂಟ್ ನೀಡದಂತೆ ‘ಮಾರ್ಕ್’ ಹಾಗೂ ‘45’ ಚಿತ್ರತಂಡಗಳು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದವು. ಈ ಹಿಂದೆ ‘ಡೆವಿಲ್’ ಸಿನಿಮಾ ತಂಡ ಇಂಥದ್ದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿತ್ತು.