ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ನಿಗದಿಯಾದಂತೆಯೇ ಮಾ.19ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಕುರಿತು ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಯಶ್‌, ‘ಫೇರಿಟೇಲ್‌ ಬಿಡುಗಡೆಗೆ 100 ದಿನ ಬಾಕಿ’ ಎಂದು ಹೇಳಿದ್ದಾರೆ. ಜೊತೆಗೆ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

 ಸಿನಿವಾರ್ತೆ

ಜ.8ರಂದು ಯಶ್‌ ಹುಟ್ಟುಹಬ್ಬ

ಜ.8ರಂದು ಯಶ್‌ ಹುಟ್ಟುಹಬ್ಬದ ಪ್ರಯುಕ್ತ ‘ಟಾಕ್ಸಿಕ್‌’ ಚಿತ್ರದ ಕಂಟೆಂಟ್‌ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ ಎನ್ನಲಾಗಿದೆ. ಇದೀಗ ಬಿಡುಗಡೆಯಾಗಿರುವ ಪೋಸ್ಟರಿನಲ್ಲಿನ ಯಶ್‌ ಬೆನ್ನಮೇಲಿನ ಟ್ಯಾಟೂ ಸಹ ಗಮನ ಸೆಳೆಯುತ್ತಿದೆ.

ಯಶ್‌ ಟಾಕ್ಸಿಕ್‌ ಜೊತೆ 3 ದೊಡ್ಡ ಸಿನಿಮಾಗಳು

ಮಾರ್ಚ್‌ 19ರ ಸಂದರ್ಭದಲ್ಲಿ ಯುಗಾದಿ ಮತ್ತು ಈದ್‌ ಹಬ್ಬ ಬಂದಿದ್ದು, ಲಾಂಗ್‌ ವೀಕೆಂಡ್‌ ಇದೆ. ಹೀಗಾಗಿಯೇ ‘ಟಾಕ್ಸಿಕ್‌’ ಜೊತೆ ಮಾರ್ಚ್‌ 20ಕ್ಕೆ ಅಜಯ್‌ ದೇವಗನ್‌ ನಟನೆಯ ‘ಧಮಾಲ್‌ 4’ , ಮಾ.19ರಂದು ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಚಿತ್ರ ಬರಲಿವೆ. ತೆಲುಗಿನಲ್ಲಿ ಅಡವಿ ಶೇಷ್‌ ಅವರ ‘ಡಕಾಯತ್‌’ (ಮಾರ್ಚ್ 19) ಕೂಡ ಬಿಡುಗಡೆಯಾಗುತ್ತಿದೆ.