ಸಾರಾಂಶ
ನಾಗರಹಾವು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರೆಬೆಲ್ ಸ್ಟಾರ್ ಅಂಬರೀಶ್ ಅವರ 72ನೇ ಜನ್ಮದಿನವಿಂದು.
ಕನ್ನಡಪ್ರಭ ಸಿನಿವಾರ್ತೆ
ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 72ನೇ ಜನ್ಮದಿನ. ತಮ್ಮ ನೆಚ್ಚಿನ ನಟನ ಜನ್ಮದಿನದ ಹಿನ್ನೆಲೆಯಲ್ಲಿ ರೆಬೆಲ್‌ಸ್ಟಾರ್ ಅಭಿಮಾನಿಗಳು ಅವರ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಲಿದ್ದಾರೆ. ಮಂಡ್ಯದ ರೈತ ಭವನದಲ್ಲಿ ಡಾ. ಅಂಬರೀಶ್ ಫೌಂಡೇಶನ್ ಸಹಕಾರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಭಾಗಿಯಾಗಲಿದ್ದಾರೆ.