ತೆಲುಗಿನಲ್ಲಿ ಸೋಲು ಕಾಣುತ್ತಿರುವ ಕನ್ನಡದ ನಟಿ ಶ್ರೀಲೀಲಾ ತಮಿಳು ಚಿತ್ರಗಳತ್ತ ಮುಖ ಮಾಡಿದ್ದಾರೆ.

 ಸಿನಿವಾರ್ತೆ

ಕನ್ನಡದಲ್ಲಿ ‘ಕಿಸ್’ ಹಾಗೂ ‘ಭರಾಟೆ’ ಚಿತ್ರಗಳ ನಂತರ ಸೀದಾ ತೆಲುಗಿಗೆ ಹೋದ ನಟ ಶ್ರೀಲೀಲಾ, ಒಂದೆರಡು ಚಿತ್ರಗಳಿಗೇ ಟಾಲಿವುಡ್‌ನ ಬೇಡಿಕೆಯ ನಟಿ ಆದರು. ಶ್ರೀಲೀಲಾ ನಟನೆಯ ತೆಲುಗಿನ ಮೊದಲ ಚಿತ್ರ ‘ಪೆ‍ಳ್ಳಿಸಂದಡಿ’ ಚಿತ್ರ ಸೋಲು ಕಂಡರೂ ಪವನ್‌ ಕಲ್ಯಾಣ್‌, ಬಾಲಕೃಷ್ಣ, ರವಿತೇಜ, ಮಹೇಶ್‌ ಬಾಬು ಅವರಂತಹ ದೊಡ್ಡ ದೊಡ್ಡ ತಾರೆಗಳಿಗೆ ನಾಯಕಿ ಆದರು. ರಶ್ಮಿಕಾ ಮಂದಣ್ಣ ಅವರಿಗೇ ಸ್ಪರ್ಧೆ ಕೊಡುತ್ತಿದ್ದಾರೆ ಎನ್ನುವ ಮಟ್ಟಕ್ಕೆ ಶ್ರೀಲೀಲಾ ಕ್ರೇಜ್‌ ಇತ್ತು. ಹೀಗಾಗಿಯೇ ಕಳೆದ ವರ್ಷ ಶ್ರೀಲೀಲಾ ಖಾತೆಯಲ್ಲಿ 10 ತೆಲುಗು ಚಿತ್ರಗಳು ಸೇರಿಕೊಂಡಿದ್ದವು. ಈ ಪೈಕಿ ಎರಡು ಚಿತ್ರಗಳು ಸಾಧಾರಣ ಗಳಿಕೆ ಮಾಡಿದರೆ ಉಳಿದಂತೆ ಬಹುತೇಕ ಸಿನಿಮಾಗಳು ಲಾಸ್‌.

ಹೀಗೆ ತೆಲುಗಿನಲ್ಲಿ ಸೋಲು ಕಾಣುತ್ತಿದ್ದ ಶ್ರೀಲೀಲಾ ಬಗ್ಗೆ ತೆಲುಗು ತಂಡಗಳು ಆಸಕ್ತಿ ತೋರಿಸದಿದ್ದಾಗ ತಮಿಳು ಚಿತ್ರಗಳತ್ತ ಮುಖ ಮಾಡಿದ್ದಾರೆ ಎಂಬುದು ಲೇಟೆಸ್ಟ್‌ ಸುದ್ದಿ. ತಮಿಳಿನಲ್ಲಿ ಅಜಿತ್‌ ಹಾಗೂ ಇಳಯ ದಪಳಪತಿ ವಿಜಯ್‌ ಜತೆಗೆ ಶ್ರೀಲೀಲಾ ನಟಿಸಲಿದ್ದಾರಂತೆ. ಹೀಗೆ ತೆಲುಗಿನಲ್ಲಿ ಹಿನ್ನೆಡೆ ಆಗಿದ್ದರೂ, ತಮಿಳಿನಲ್ಲಿ ಮುನ್ನಡೆ ಸಾಧಿಸುವ ಸಾಹಸದಲ್ಲಿದ್ದಾರಂತೆ ನಟಿ ಶ್ರೀಲೀಲಾ.