ತೂಫಾನ್ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಆಗಿದೆ.

 ಸಿನಿವಾರ್ತೆ

ಕನ್ನಡ ಹಾಗೂ ಹಿಂದಿಯಲ್ಲಿ ಮೂಡಿ ಬರುತ್ತಿರುವ ‘ತೂಫಾನ್‌’ ಚಿತ್ರದ ಫಸ್ಟ್‌ ಗ್ಲಿಂಪ್ಸ್‌ ಇತ್ತೀಚೆಗೆ ಬಿಡುಗಡೆ ಆಗಿದೆ. ಬೆಳಗಾವಿ ಮೂಲದ ಕನ್ನಡ ಅಭಿಮಾನಿ ಷರೀಫಾ ಬೇಗಂ ನದಾಫ್ ನಿರ್ಮಾಣದ ಈ ಚಿತ್ರವನ್ನು ಆರ್‌ ಚಂದ್ರಕಾಂತ್‌ ನಿರ್ದೇಶಿಸಿದ್ದಾರೆ. ರೋಶನ್‌ ಕತೆ ಬರೆಯುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಅನುಷಾ ರೈ ನಾಯಕಿ.

ವಕೀಲರಾದ ನಾರಾಯಣಸ್ವಾಮಿ ಹಾಗೂ ಸಾಹಿತಿ ಕವಿರಾಜ್‌ ಚಿತ್ರದ ಗ್ಲಿಂಪ್ಸ್‌ ಬಿಡುಗಡೆ ಮಾಡಿದರು. ಆರ್‌ ಚಂದ್ರಕಾಂತ್‌, ‘ಇದು 1994ರ ಕತೆ. ತನ್ನ ತಂದೆಗಾಗಿ ಮಗನೊಬ್ಬ ಸೇಡು ತೀರಿಸಿಕೊಳ್ಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರಕ್ಕೆ ಈ ಮೊದಲು ‘ಭೈರ್ಯ-07’ ಎನ್ನುವ ಹೆಸರಿತ್ತು. ಈಗ ಚಿತ್ರಕ್ಕೆ ‘ತೂಫಾನ್’ ಎನ್ನುವ ಹೆಸರು ಇಡಲಾಗಿದೆ’ ಎಂದರು.

ಭೀಷ್ಮ ರಾಮಯ್ಯ, ರಂಗಾಯಣ ರಘು, ಅಶ್ವಿನ್‌ ಹಾಸನ್, ಸೂರ್ಯ ಪ್ರವೀಣ್, ಅಯ್ಯಪ್ಪ ಶರ್ಮ, ಬಿ. ಸುರೇಶ್, ಉಗ್ರಂ ರವಿ ಚಿತ್ರದಲ್ಲಿದ್ದಾರೆ.