ಅಡವಿಕಟ್ಟೆಯಲ್ಲಿ ಅಭಿಜಿತ್‌

| Published : Jul 06 2024, 12:45 AM IST / Updated: Jul 06 2024, 07:22 AM IST

abhijith

ಸಾರಾಂಶ

ಅಭಿಜಿತ್ ನಟನೆಯ ಅಡವಿಕಟ್ಟೆ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

  ಸಿನಿವಾರ್ತೆ

ಮಾಜಿ ಸಂಸದ ಡಿ ಕೆ ಸುರೇಶ್‌ ‘ಅಡವಿಕಟ್ಟೆ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಅಭಿಜಿತ್‌, ನಾಗರಾಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಸಂಜೀವ್‌ ಗಾವಂಡಿ ನಿರ್ದೇಶಿಸಿದ್ದಾರೆ. ಉಮಾ ಎಸ್‌ ನಿರ್ಮಿಸಿದ್ದಾರೆ.

ಈ ಸಂದರ್ಭದಲ್ಲಿ ನಟ ಅಭಿಜಿತ್‌, ‘ಟ್ರೇಲರ್‌ನಷ್ಟೇ ಚಿತ್ರವೂ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಭಿನ್ನವಾಗಿದೆ’ ಎಂದರು. ಸಂಜೀವ್‌ ಗಾವಂಡಿ, ‘ಇದು ಸಸ್ಪೆನ್ಸ್ ಥ್ರಿಲ್ಲರ್‌ ಜತೆಗೆ ಹಾರರ್‌ ವರ್ಗಕ್ಕೆ ಸೇರುವ ಸಿನಿಮಾ. ಕಾಡಿನಲ್ಲಿ ನಡೆಯುವ ಕತೆ’ ಎಂದರು. ನಾಗರಾಜು, ಶಾಂತಿ, ಮಂಜುಳ ಹಾಗೂ ವಿತರಕ ಶ್ರೀಧರ್ ಇದ್ದರು.