ಸಾರಾಂಶ
ಕೊಲೆ ಆರೋಪದಲ್ಲಿ ನಟ ದರ್ಶನ್ ಅವರು ಬಂಧನದಲ್ಲಿರುವಾಗಲೇ ಒಂದಿಷ್ಟು ಸಿನಿಮಾ ಶೀರ್ಷಿಕೆಗಳು ಟ್ರೆಂಡ್ ಆಗುತ್ತಿವೆ.
ಕನ್ನಡಪ್ರಭ ಸಿನಿವಾರ್ತೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಸಂಬಂಧಿಸಿದ ಕೆಲವು ಟೈಟಲ್‌ಗಳು ಸದ್ದು ಮಾಡುತ್ತಿವೆ. ‘ಡಿ ಗ್ಯಾಂಗ್’ ಶೀರ್ಷಿಕೆ ನಂತರ ಇದೀಗ ‘ಖೈದಿ ನಂ.6106’ ಹಾಗೂ ‘ಎ1’ ಶೀರ್ಷಿಕೆಗಳು ಚಾಲ್ತಿಗೆ ಬಂದಿವೆ. ಈ ಪೈಕಿ ‘ಎ1’ ಶೀರ್ಷಿಕೆಯನ್ನು ಕೃಷ್ಣೇಗೌಡ ಸಾರಥ್ಯದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗಗನ್ ಸಿನಿ ಕ್ರಿಯೇಷನ್ ಸಂಸ್ಥೆ ನೋಂದಣಿ ಮಾಡಿಕೊಂಡಿದೆ.ಇನ್ನು ‘ಖೈದಿ ನಂ.6106’ ಶೀರ್ಷಿಕೆ ಅನುಮತಿ ಹಾಗೂ ನೋಂದಣಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಲಾಗಿದ್ದು, ವಾಣಿಜ್ಯ ಮಂಡಳಿ ಕಡೆಯಿಂದ ‘ಪೆಂಡಿಂಗ್‌ನಲ್ಲಿ ಇಡಲಾಗಿದೆ’ ಎನ್ನುವ ಉತ್ತರ ಸಿಕ್ಕಿದೆ. ಕೊಲೆ ಆರೋಪದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ‘ಎ1’ ಆರೋಪಿ ಆಗಿದ್ದು, ದರ್ಶನ್ ಅವರಿಗೆ ‘ಖೈದಿ ನಂ.6106’ ಸಂಖ್ಯೆ ನೀಡಲಾಗಿದೆ. ಈಗಾಗಲೇ ದರ್ಶನ್ ಅಭಿಮಾನಿಗಳು ತಮ್ಮ ಕಾರು, ಬೈಕುಗಳಲ್ಲಿ ‘ಖೈದಿ ನಂ.6106’ ಎಂದು ಸ್ಟಿಕ್ಕರ್ಸ್ ಅಂಟಿಕೊಳ್ಳುವ ಮೂಲಕ ಆ ಸಂಖ್ಯೆಯನ್ನು ಟ್ರೆಂಡ್ ಮಾಡುತ್ತಿದ್ದಾರೆ.