ಸಾರಾಂಶ
ದೆಹಲಿಯಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ಬರೋಬ್ಬರಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಎಂಸಿ ಸಮೀಕ್ಷಾ ವರದಿ ತಿಳಿಸಿದೆ.
ನವದೆಹಲಿ: ದೇಶದಲ್ಲಿ ಐದು ವರ್ಷದಲ್ಲಿ 122 ವೈದ್ಯಕೀಯ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯೊಂದು ಹೇಳಿದೆ.
ಜೊತೆಗೆ ಇದೇ ಅವಧಿಯಲ್ಲಿ 1270 ವಿದ್ಯಾರ್ಥಿಗಳು ಕಾಲೇಜು ಪೂರ್ಣಾವಧಿ ಮುಗಿಸದೆ ತೊರೆದಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಡೆಸಿದ ಸಮೀಕ್ಷೆಯಲ್ಲಿ ಈ ದತ್ತಾಂಶ ಹೊರಬಂದಿದೆ.
ಇದರಲ್ಲಿ ಸಾವಿಗೆ ಪ್ರಮುಖ ಕಾರಣವೇನೆಂದರೆ, ಸರಿಯಾಗಿ ವಿರಾಮ ಸಿಗದಿರುವುದು, ಹಿರಿಯ ಉಪನ್ಯಾಸಕರಿಂದ ಕಿರುಕುಳ, ಕ್ಲಿಷ್ಟಕರ ಪಠ್ಯಕ್ರಮಗಳು ಪ್ರಮುಖವಾಗಿದೆ.
ಇನ್ನು ದೆಹಲಿಯ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅವಧಿಪೂರ್ವದಲ್ಲಿ ಕಾಲೇಜು ತೊರೆದರೆ ಅವರು 50 ಲಕ್ಷ ರು. ದಂಡ ಕಟ್ಟಬೇಕಾಗಿದೆ. ಹೀಗಾಗಿ ಸಾವಿಗೆ ಇದು ಕಾರಣ ಎಂದು ವರದಿ ಹೇಳಿದೆ.