ಕೇಜ್ರಿವಾಲ್‌ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

| Published : May 30 2024, 12:48 AM IST / Updated: May 30 2024, 07:10 AM IST

ಕೇಜ್ರಿವಾಲ್‌ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ
Share this Article
  • FB
  • TW
  • Linkdin
  • Email

ಸಾರಾಂಶ

ತಾವು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಜಾಮೀನು ಅರ್ಜಿಯನ್ನು ಇನ್ನೂ ಒಂದು ವಾರ ವಿಸ್ತರಿಸಬೇಕೆಂದು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ನವದೆಹಲಿ: ತಾವು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಜಾಮೀನು ಅರ್ಜಿಯನ್ನು ಇನ್ನೂ ಒಂದು ವಾರ ವಿಸ್ತರಿಸಬೇಕೆಂದು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ವಿಚಾರಣಾ ನ್ಯಾಯಾಲಯದಲ್ಲಿ ಸಾಮಾನ್ಯ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಹೀಗಾಗಿ ನಾವು ಈ ಅರ್ಜಿಯ ವಿಚಾರಣೆ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಕೇಜ್ರಿವಾಲ್‌ ಇದೀಗ ವಿಚಾರಣಾ ನ್ಯಾಯಾಲಯಕ್ಕೆ ಮೊರೆ ಹೋಗಬೇಕಿದೆ. ಒಂದು ವೇಳೆ ಅಲ್ಲಿ ಅವರಿಗೆ ತಕ್ಷಣಕ್ಕೆ ಜಾಮೀನು ಸಿಗದೇ ಹೋದಲ್ಲಿ ಜೂ.2ರಂದು ಅವರು ಮರಳಿ ತಿಹಾರ್‌ ಜೈಲು ಸೇರಬೇಕಾಗುತ್ತದೆ.

ಶಿವನಿಗೆ ರಕ್ಷಣೆ ಬೇಕಿಲ್ಲ: ಅಕ್ರಮ ದೇಗುಲ ಧ್ವಂಸಕ್ಕೆ ದೆಹಲಿ ಹೈಕೋರ್ಟ್‌ ಆದೇಶ

ನವದೆಹಲಿ: ಶಿವನಿಗೆ ಮಾನವರಿಂದ ರಕ್ಷಣೆ ಬೇಕಿಲ್ಲ. ಬದಲಾಗಿ ಮಾನವರೇ ಶಿವನಿಂದ ರಕ್ಷಣೆ ಪಡೆಯಬೇಕು ಎಂದು ದೆಹಲಿ ಹೈಕೋರ್ಟ್‌ ದಾವೆಯೊಂದರ ವಿಚಾರಣೆ ನಡೆಸುವಾಗ ಅಭಿಪ್ರಾಯಪಟ್ಟಿದೆ. ನಗರದ ಗೀತಾ ಕಾಲೋನಿಯಲ್ಲಿ ಯಮುನಾ ನದಿ ದಡದಲ್ಲಿರುವ ಪ್ರಾಚೀನ ಶಿವ ದೇಗುಲಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ, ‘ಶಿವನಿಗೆ ಯಾವುದೇ ರಕ್ಷಣೆ ಬೇಕಿಲ್ಲ. ಆದರೆ ಆತ ಯಮುನಾ ನದಿಯ ಪ್ರವಾಹವನ್ನು ತಡೆಯುವ ಸಲುವಾಗಿ ಎಲ್ಲ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿ ಪ್ರದೇಶಗಳನ್ನು ತೆರವು ಮಾಡಿರುವುದನ್ನು ಕೇಳಿ ಮತ್ತಷ್ಟು ಸಂತೋಷಗೊಳ್ಳುತ್ತಾನೆ’ ಎಂದು ನ್ಯಾ ಧರ್ಮೇಶ್‌ ಶರ್ಮಾ ಅಭಿಪ್ರಾಯಪಟ್ಟರು. ಅಲ್ಲದೆ ದೇಗುಲದಲ್ಲಿರುವ ಮೂರ್ತಿಗಳು ಮತ್ತು ಲಿಂಗವನ್ನು 15 ದಿನದೊಳಗೆ ಸ್ಥಳಾಂತರ ಮಾಡುವಂತೆ ಆದೇಶಿಸಿದರು.

ದೆಹಲಿ ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತ ಕೇಜ್ರಿವಾಲ್‌ ಅವರಿಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಸಲುವಾಗಿ ಸುಪ್ರೀಂಕೋರ್ಟ್‌ ಇತ್ತೀಚೆಗೆ ಮಧ್ಯಂತರ ಜಾಮೀನು ನೀಡಿತ್ತು.