ಬಾರಾಮತಿಯಲ್ಲಿ ಸುಪ್ರಿಯಾ ಸುಳೆ ಹಾಗೂ ಸುನೇತ್ರಾ ಪವಾರ್‌ ನಡುವೆ ಚುನಾವಣೆ ನಡೆಯುವುದು ಖಚಿತವಾಗಿದೆ.

ಮುಂಬೈ: ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದಲ್ಲಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಟಿಕೆಟ್‌ ಅನ್ನು ಸ್ವತಃ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾಗೆ ನೀಡಲಾಗಿದೆ. ವಿಶೇಷವೆಂದರೆ ಇದೇ ಕ್ಷೇತ್ರದಲ್ಲಿ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಸ್ಪರ್ಧಿಸುತ್ತಿದ್ದಾರೆ. ಅಜಿತ್‌ ಪವಾರ್‌ ಅವರು ಶರದ್‌ ಪವಾರ್‌ ಅವರ ಸೋದರ ಸಂಬಂಧಿ. ಹೀಗಾಗಿ ಇಲ್ಲಿ ಇದೀಗ ಸಂಬಂಧಿಗಳ ಸಮರ ಖಚಿತವಾಗಿದೆ.