ಸಾರಾಂಶ
ಕದನವಿರಾಮ ಘೋಷಣೆ ಬಳಿಕ ಪಾಕ್ ಅದನ್ನು ಉಲ್ಲಂಘಿಸಿದ ಬಗ್ಗೆ ಭಾರತ ಕಿಡಿಕಾರಿದೆ.
ನವದೆಹಲಿ: ಕದನವಿರಾಮ ಘೋಷಣೆ ಬಳಿಕ ಪಾಕ್ ಅದನ್ನು ಉಲ್ಲಂಘಿಸಿದ ಬಗ್ಗೆ ಭಾರತ ಕಿಡಿಕಾರಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಶನಿವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನ ಸಂಜೆ ಒಪ್ಪಂದ ಮಾಡಿಕೊಂಡಿದ್ದವು ಕಳೆದ ಕೆಲವು ಗಂಟೆಗಳಿಂದ, ಈ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸುತ್ತಿದೆ.
ಭಾರತೀಯ ಸೇನೆಯು ಈ ಗಡಿ ಒಳನುಗ್ಗುವಿಕೆಗೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಮತ್ತು ಅದನ್ನು ನಿಭಾಯಿಸುತ್ತಿದೆ. ಈ ಅತಿಕ್ರಮಣವು ಅತ್ಯಂತ ಖಂಡನೀಯ ಮತ್ತು ಪಾಕಿಸ್ತಾನ ಇದಕ್ಕೆ ಕಾರಣವಾಗಿದೆ. ಪಾಕಿಸ್ತಾನವು ಈ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಈ ಒಳನುಗ್ಗುವಿಕೆಯನ್ನು ತಡೆಯಲು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.