ಸಾರಾಂಶ
ನವದೆಹಲಿ: ಭಾರತದ ವಿರುದ್ಧ ದಾಳಿಗೆ ಶಸ್ತ್ರಾಸ್ತ್ರ, ಸೈನಿಕರನ್ನು ಪೂರೈಸಿ ಭಾರತದಿಂದ ಬಾಯ್ಕಾಟ್ ಅಭಿಯಾನ ಎದುರಿಸುತ್ತಿದ್ದರೂ ಟರ್ಕಿ ಮಾತ್ರ ಪಾಕ್‌ಗೆ ಬೆಂಬಲ ಮುಂದುವರೆಸಿದೆ. ಸ್ವತಃ ಟರ್ಕಿ ಪ್ರಧಾನಿ ಎರ್ಡೋಗನ್ ಇದನ್ನು ಪುನರುಚ್ಚರಿಸಿದ್ದು, ‘ನಮ್ಮ ದೇಶ ಒಳ್ಳೆಯ ಮತ್ತು ಕೆಟ್ಟದ್ದು ಎರಡೂ ಸಂದರ್ಭದಲ್ಲಿಯೂ ಪಾಕಿಸ್ತಾನ ಪರ ನಿಲ್ಲಲಿದೆ’ ಎಂದು ಪಾಕ್ ಪ್ರಧಾನಿ ಶೆಹಬಾಜ್‌ಗೆ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎರ್ಡೋಗನ್ ಪಾಕ್ ಜೊತೆಗಿನ ಸ್ನೇಹ ಅಚಲ ಎಂದಿದ್ದಾರೆ. ‘ ಹಿಂದಿನಂತೆ ಭವಿಷ್ಯದಲ್ಲಿಯೂ ಒಳ್ಳೆಯ ಸಮಯಗಳಲ್ಲಿ ಮತ್ತು ಕೆಟ್ಟ ಸಂದರ್ಭದಲ್ಲಿಯೂ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಟರ್ಕಿ- ಪಾಕಿಸ್ತಾನವು ಸಹೋದರತ್ವ ನಿಜವಾದ ಸ್ನೇಹದ ಅತ್ಯುತ್ತಮ ಉದಾಹರಣೆ, ನಾವು ಪಾಕಿಸ್ತಾನದ , ಶಾಂತಿ ನೆಮ್ಮದಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಈ ಸ್ನೇಹ ಹೀಗೆ ಇರಲಿ’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿದ್ದು , ‘ಈ ಸಹೋದರ ಸಂಬಂದಧ ಬಗ್ಗೆ ಹೆಮ್ಮೆಯಿದೆ. ಎರ್ಡೋಗನ್ ಬೆಂಬಲ, ಪಾಕಿಸ್ತಾನದ ಜೊತೆಗೆ ಸ್ನೇಹ ಮನಸ್ಸು ಮುಟ್ಟಿದೆ’ ಎಂದಿದ್ದಾರೆ.