ಸಾರಾಂಶ
- ಕೃತಕ ಬುದ್ಧಿಮತ್ತೆ ಬಳಸಿ ನಮ್ಮ ಹೇಳಿಕೆ ತಿರುಚಲು ಕಾಂಗ್ರೆಸ್ ಯತ್ನ
ಪಿಟಿಐ ಧಾರಾಶಿವ (ಮಹಾರಾಷ್ಟ್ರ)‘ಬಿಜೆಪಿ ನೇತೃತ್ವದ ಸರ್ಕಾರವನ್ನು ಎದುರಿಸಲು ಸಾಧ್ಯವಾಗದ ಪ್ರತಿಸ್ಪರ್ಧಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವಿಡಿಯೋ ಪ್ರಸಾರ ಮಾಡಲು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆರೋಪಿಸಿದ್ದಾರೆ. ಈ ಮೂಲಕ ಸತತ 2ನೇ ದಿನವೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಿರುಚಿದ ಭಾಷಣದ ವಿಡಿಯೋ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮಹಾರಾಷ್ಟ್ರದ ಧಾರಾಶಿವದಲ್ಲಿ ಮಂಗಳವಾರ ಬಿಜೆಪಿ ಪ್ರಚಾರ ಭಾಷಣ ಮಾಡಿದ ಮೋದಿ, ‘ಈಗ ಅವರ (ಕಾಂಗ್ರೆಸ್) ಸ್ಥಿತಿ ಹೇಗಿದೆ ಎಂದರೆ ಅವರ ಸುಳ್ಳುಗಳು ಕೆಲಸ ಮಾಡುತ್ತಿಲ್ಲ, ಅವರು ನನ್ನ ಮುಖವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆಯ ಸಹಾಯದಿಂದ ತಮ್ಮ ‘ಮೊಹಬ್ಬತ್ ಕಿ ದುಕಾನ್’ನಲ್ಲಿ (ಪ್ರೀತಿಯ ಅಂಗಡಿಯಲ್ಲಿ) ನಕಲಿ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ನನ್ನಂತಹ ನಾಯಕರ ಹೇಳಿಕೆಗಳನ್ನು ತಿರುಚಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾರೆ, ಈ ಸುಳ್ಳಿನ ಅಂಗಡಿಯನ್ನು ಮುಚ್ಚಬೇಕು’ ಎಂದು ಕರೆ ನೀಡಿದರು.ಪವಾರ್ ಅತೃಪ್ತ ಅತ್ಮ:ಇನ್ನು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ‘ಅಲೆದಾಡುವ ಆತ್ಮ’ (ಅತೃಪ್ತ ಆತ್ಮ) ಎಂದು ಕರೆದ ಮೋದಿ, ‘ಅವರು ಕೇಂದ್ರ ಕೃಷಿ ಸಚಿವರಾಗಿದ್ದಾಗ ರೈತರಿಗೆ ಹೆಚ್ಚಿನದನ್ನು ಮಾಡಲಿಲ್ಲ. ಅವರು ಕೇಂದ್ರ ಕೃಷಿ ಸಚಿವರಾಗಿದ್ದಾಗ, ರೈತರು ತಮ್ಮ ಬಾಕಿಗಾಗಿ ಕಬ್ಬಿನ ಕಚೇರಿಗಳಿಗೆ ಅಲೆಯುತ್ತಿದ್ದರು’ ಎಂದು ಆರೋಪಿಸಿದರು.‘ಮಹಾರಾಷ್ಟ್ರದಲ್ಲಿ ‘ಭಟಕ್ತೀ ಆತ್ಮಾ'''''''' (ಅಲೆದಾಡುವ ಆತ್ಮ) ಇದೆ. ಅದು ತಾನು ಯಶ ಕಾಣದಿದ್ದರೆ ಇತರರ ಒಳ್ಳೆಯ ಕೆಲಸವನ್ನು ಹಾಳು ಮಾಡುತ್ತದೆ. ಮಹಾರಾಷ್ಟ್ರವು ಅದಕ್ಕೆ ಬಲಿಯಾಗಿದೆ. ಈ ಆತ್ಮ 45 ವರ್ಷ ಕಾಲ ಆಡಿದ ಆಟದಿಂದ ಅನೇಕ ಸರ್ಕಾರಗಳು ಪೂರ್ಣಾವಧಿ ಆಡಳಿತ ನಡೆಸಲು ಆಗದೇ ಪತನಗೊಂಡವು’ ಎಂದು ಕಿಡಿಕಾರಿದರು.ಇದೇ ವೇಳೆ, ‘5 ವರ್ಷದ ಹಿಂದೆ ಮಹಾರಾಷ್ಟ್ರದ ನಾಯಕರೊಬ್ಬರು (ಸುಶೀಲ್‌ಕುಮಾರ್ ಶಿಂಧೆ) ಮಹಾರಾಷ್ಟ್ರದ ನೀರಿನ ಸಮಸ್ಯೆ ಬಗೆಹರಿಸುವೆ ಎಂದು ಚುನಾವಣೆ ಗೆದ್ದಿದ್ದರು. ಆದರೆ 2014ರಲ್ಲಿ ನಮ್ಮ ಸರ್ಕಾರ ಬಂದಾಗ ಕಳೆದ 60 ವರ್ಷದಲ್ಲಿ ಮಹಾರಾಷ್ಟ್ರದ 26 ಸೇರಿ 100 ನೀರವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದನ್ನು ನಾನು ಗಮನಿಸಿದೆ. ಹೀಗಾಗಿ ಜನರಿಗೆ ಕುಡಿಯಲು ಹನಿ ನೀರು ಕೊಡದವರು ಇನ್ನೇನು ಅಭಿವೃದ್ಧಿ ಮಾಡಬಲ್ಲರು’ ಎಂದು ಮೋದಿ ಹರಿಹಾಯ್ದರು.ಆದೆ ತಮ್ಮ ಸರ್ಕಾರದ 10 ವರ್ಷಗಳ ಮತ್ತು 60 ವರ್ಷಗಳ ಕಾಂಗ್ರೆಸ್ ಆಡಳಿತದ ನಡುವಿನ ವ್ಯತ್ಯಾಸವನ್ನು ಜನರು ನೋಡುತ್ತಿದ್ದಾರೆ ಎಂದು ಮೋದಿ ಹೇಳಿಕೊಂಡರು.
--ಬಹುಮತದಷ್ಟು ಸ್ಥಾನದಲ್ಲೂ ಕಾಂಗ್ರೆಸ್ ಸ್ಪರ್ಧೆ ಇಲ್ಲ: ಮೋದಿ ವ್ಯಂಗ್ಯ
‘ಮತದಾರರು ತಮ್ಮ ಮತವನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ನೀಡುವ ಮೂಲಕ ವ್ಯರ್ಥ ಮಾಡಬಾರದು. ಲೋಕಸಭೆಯಲ್ಲಿ ಸರಳ ಬಹುಮತಕ್ಕೆ ಬೇಕಾದ ಕನಿಷ್ಠ ಸ್ಥಾನಗಳಿಗೂ ಸ್ಪರ್ಧಿಸದವರಿಗೆ ನಿಮ್ಮ ಮತವನ್ನು ಏಕೆ ವ್ಯರ್ಥ ಮಾಡುತ್ತೀರಿ?’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದರು.ಈ ಮೂಲಕ ಕಾಂಗ್ರೆಸ್ ಪಕ್ಷ ಇತಿಹಾಸದಲ್ಲೇ ಕನಿಷ್ಠ (ಸುಮಾರು 300 ಸ್ಥಾನ) ಸ್ಥಾನಗಳಲ್ಲಿ ಸ್ಪರ್ಧಿಸಿದ್ದನ್ನು ಅವರು ಪರೋಕ್ಷವಾಗಿ ಪ್ರಸ್ತಾಪಿಸಿದರು,ಮಹಾರಾಷ್ಟ್ರ ಬಿಜೆಪಿ ರ್‍ಯಾಲಿಯಲ್ಲಿ ಅವರು ಮಾತನಾಡಿ, ‘ದೇಶದಲ್ಲಿ ಬಲಿಷ್ಠ ಸರ್ಕಾರವಿದ್ದಾಗ ಅದರ ಗಮನ ವರ್ತಮಾನ ಹಾಗೂ ಭವಿಷ್ಯದತ್ತ ಇರುತ್ತದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಗಳು ದೇಶದ ಸ್ವಾಭಿಮಾನಕ್ಕೆ ಸಂಬಂಧಿಸಿದ್ದು. ಹೀಗಾಗಿ ಯಾವುದೇ ಕ್ಷಣದಲ್ಲಿ ತನಗೊಳ್ಳಬಹುದಾದ ದುರ್ಬಲ ಸರ್ಕಾರವು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯವಿದೆಯೇ?’ ಎಂದು ಪ್ರಶ್ನಿಸಿದರು.