ಸಾರಾಂಶ
ದುಬೈ: ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನಿ ಆಟಗಾರರು, ಸಹಾಯಕ ಸಿಬ್ಬಂದಿ ಜೊತೆ ‘ನೋ ಹ್ಯಾಂಡ್ ಶೇಕ್’ ನಿಯಮ ಪಾಲಿಸುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ, ಪ್ರಧಾನ ಕೋಚ್ ಗೌತಮ್ ಗಂಭೀರ್ ‘ಅಂಪೈರ್‌ಗಳಿಗಾದರೂ ಹ್ಯಾಂಡ್ ಶೇಕ್ ಮಾಡಿ’ ಎಂದು ಸೂಚನೆ ನೀಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಪಾಕ್ ವಿರುದ್ಧ ಸೂಪರ್-4 ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಂ ಬಾಗಿಲ ಬಳಿ ನಿಂತಿದ್ದ ಭಾರತೀಯ ಆಟಗಾರರು, ಸಿಬ್ಬಂದಿಯನ್ನು ಉದ್ದೇಶಿಸಿ ಗಂಭೀರ್ ಈ ಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.ನಖ್ವಿ, ಮುನೀರ್‌ರಿಂದ ಮಾತ್ರ
ಭಾರತವನ್ನು ಸೋಲಿಸಲು
ಸಾಧ್ಯ: ಇಮ್ರಾನ್ ವ್ಯಂಗ್ಯಲಾಹೋರ್: ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ ಸೋತಿರುವ ಪಾಕಿಸ್ತಾನ ತಂಡವನ್ನು ಮಾಜಿ ಕ್ರಿಕೆಟಿಗ, ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವ್ಯಂಗ್ಯವಾಡಿದ್ದು, ‘ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಸೇನಾ ಮುಖ್ಯಸ್ಥ ಜ. ಆಸೀಮ್ ಮುನೀರ್ ಆರಂಭಿಕ ಆಟಗಾರರಾಗಿ ಆಡಿದರೆ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ’ ಎಂದಿದ್ದಾರೆ. ಸದ್ಯ ಜೈಲಿನಲ್ಲಿರುವ ಇಮ್ರಾನ್ ಈ ರೀತಿ ಹೇಳಿದ್ದಾರೆ ಎಂದು ಸಹೋದರಿ ಅಲೀಮಾ ಖಾನ್ ಹೇಳಿಕೊಂಡಿದ್ದಾರೆ. ಇದರ ಜತೆಗೆ ‘ಭಾರತವನ್ನು ಸೋಲಿಸಬೇಕಾದರೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಅಂಪೈರ್‌ಗಳಾಗಬೇಕು’ ಎಂದೂ ಇಮ್ರಾನ್ ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಂದಿನಿಂದ ಕೊರಿಯಾಓಪನ್: ಕನ್ನಡಿಗ ಆಯುಷ್ಮೇಲೆ ಹೆಚ್ಚಿನ ನಿರೀಕ್ಷೆಸುವೊನ್ (ಕೊರಿಯಾ): ಮಂಗಳವಾರ ಇಲ್ಲಿ ಆರಂಭಗೊಳ್ಳಲಿರುವ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕದ ಆಯುಷ್ ಶೆಟ್ಟಿ ಹಾಗೂ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್, ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅನುಪಮಾ ಉಪಾಧ್ಯಾಯ ಮೇಲೆ ನಿರೀಕ್ಷೆ ಇಡಲಾಗಿದೆ. ಸಾತ್ವಿಕ್-ಚಿರಾಗ್ ಈ ಟೂರ್ನಿಗೆ ಗೈರಾಗಲಿದ್ದಾರೆ.ಜೋಹರ್ ಕಪ್ ಹಾಕಿ:
ರಾಜ್ಯದ ಸುನಿಲ್ ಆಯ್ಕೆನವದೆಹಲಿ: ಅ.11ರಿಂದ 18ರ ವರೆಗೂ ಮಲೇಷ್ಯಾದಲ್ಲಿ ನಡೆಯಲಿರುವ ಸುಲ್ತಾನ್ ಆಫ್ ಜೋಹರ್ ಕಿರಿಯರ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಡಿಫೆಂಡರ್ ಸುನಿಲ್ ಪಿ.ಬಿ. ಆಯ್ಕೆಯಾಗಿದ್ದಾರೆ. ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ. ಟೂರ್ನಿಯಲ್ಲಿ ಭಾರತ, ಮಲೇಷ್ಯಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ನ್ಯೂಜಿಲೆಂಡ್ ತಂಡಗಳು ಪಾಲ್ಗೊಳ್ಳಲಿವೆ.
ಏಕದಿನದಿಂದ ನಿವೃತ್ತಿಹಿಂಪಡೆದ ಡಿ ಕಾಕ್
ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಾರಾ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್‌ಗೆ ಘೋಷಿಸಿದ್ದ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಮುಂಬರುವ ಪಾಕಿಸ್ತಾನ ಪ್ರವಾಸಕ್ಕೆ ಡಿ ಕಾಕ್, ಏಕದಿನ ಹಾಗೂ ಟಿ20 ತಂಡಗಳಿಗೆ ಆಯ್ಕೆಯಾಗಿದ್ದಾರೆ. ಡಿ ಕಾಕ್ 2023ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2024ರ ಟಿ20 ವಿಶ್ವಕಪ್‌ನಲ್ಲಿ ಕೊನೆ ಬಾರಿ ದ.ಆಫ್ರಿಕಾ ಪರ ಟಿ20 ಆಡಿದ್ದರು.ಅ.1ಕ್ಕೆ ಮುಂಬೈಗೆ ಬೋಲ್ಟ್
ಮುಂಬೈ: ಅ.1ರಂದು ಮುಂಬೈನಲ್ಲಿ ನಡೆಯಲಿರುವ ಬಿಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ನಡುವಿನ ಪ್ರದರ್ಶನ ಫುಟ್ಬಾಲ್ ಪಂದ್ಯದಲ್ಲಿ ಭಾಗಿಯಾಗಲು ತಾರಾ ಓಟಗಾರ ಉಸೇನ್ ಬೋಲ್ಟ್ ಭಾರತಕ್ಕೆ ಬರಲಿದ್ದಾರೆ. ಪೂಮಾ ಆಯೋಜಿಸುತ್ತಿರುವ ಈ ಪಂದ್ಯಗಳು ಸೆ.30ರಿಂದ ಆರಂಭವಾಗಲಿದ್ದು, ಜಮೈಕಾದ ತಾರೆ ಅ.1ರಂದು ಉಭಯ ತಂಡಗಳ ಪರ ತಲಾ ಅರ್ಧ ಅವಧಿಗೆ ಆಡಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಬೋಲ್ಟ್ ಜತೆಗೆ ಅನೇಕ ಫುಟ್ಬಾಲ್ ತಾರೆಗಳು, ಬಾಲಿವುಡ್ ಕಲಾವಿದರ ಭಾಗವಹಿಸಲಿದ್ದಾರೆ.