ವಿಶ್ವಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. 2019ರಿಂದ 2024ರ ಅವಧಿಯಲ್ಲಿ ರಾಸಾಯನಿಕಯುಕ್ತ ತುಪ್ಪ ಬಳಸುತ್ತಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದರ ಅರಿವಿದ್ದೂ ಟಿಟಿಡಿ ತುಪ್ಪ ಖರೀದಿ ಮುಂದುವರಿಸಿತ್ತು ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬಹಿರಂಗಪಡಿಸಿದೆ.

-ಕಲುಷಿತ ತುಪ್ಪ ಹಗರಣದಲ್ಲಿ ಮಹತ್ವದ ಅಂಶ ಬೆಳಕಿಗೆ

-2019-24ರ ಪರೀಕ್ಷೆಯಲ್ಲಿ ರಾಸಾಯನಿಕ ಅಂಶ ದೃಢ

-ತುಪ್ಪದ ಟೆಂಡರ್ ನಿಯಮ ಸಡಿಲಗೊಳಿಸಿದ್ದ ಟಿಟಿಡಿ ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. 2019ರಿಂದ 2024ರ ಅವಧಿಯಲ್ಲಿ ರಾಸಾಯನಿಕಯುಕ್ತ ತುಪ್ಪ ಬಳಸುತ್ತಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದರ ಅರಿವಿದ್ದೂ ಟಿಟಿಡಿ ತುಪ್ಪ ಖರೀದಿ ಮುಂದುವರಿಸಿತ್ತು ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬಹಿರಂಗಪಡಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ (ಎಸ್‌ಐಟಿ) ಆಂಧ್ರಪ್ರದೇಶ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ, ‘ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಡೆಸಿದ್ದ ಪರೀಕ್ಷೆಯಲ್ಲಿ, ತುಪ್ಪದಲ್ಲಿ ಬೀಟಾ-ಸೆಟೊಸ್ಟೆರಾಲ್ ಎಂಬ ರಾಸಾಯನಿಕ ಇರುವಿಕೆ ಪತ್ತೆ ಹಚ್ಚಿತ್ತು. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗಂಭೀರ ಗುಣಮಟ್ಟ ಸಮಸ್ಯೆ ಬಗ್ಗೆ ತಿಳಿದಿದ್ದರೂ ಕ್ರಮ ಕೈಗೊಳ್ಳಲು ವಿಫಲವಾಯಿತು. 2020ರಲ್ಲಿ ಟಿಟಿಡಿ ಅಧಿಕಾರಿಗಳು ಮೊದಲು ತುಪ್ಪದ ಟೆಂಡರ್‌ ನಿಯಮಗಳನ್ನು ಬಿಗಿಗೊಳಿಸಿದರು. ಆದರೆ ಯಾವುದೇ ಸ್ಪಷ್ಟನೆ ಕೊಡದೆ ಕೇವಲ ಐದೇ ತಿಂಗಳಲ್ಲಿ ನಿಯಮಗಳನ್ನು ಸಡಿಲಗೊಳಿಸಿದರು’ ಎಂದು ತಿಳಿಸಿದೆ.