ಚಿನ್ನ, ಬೆಳ್ಳಿ ದರ ಹೆಚ್ಚಳ ಪರ್ವ ಮುಂದುವರೆದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಿ ದರ ಕೇಜಿಗೆ 3,07,900 ರು.ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಮತ್ತೊಂದೆಡೆ ಚಿನ್ನದ ದರವೂ ಹೆಚ್ಚಳ ಕಂಡಿದ್ದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1, 7,550 ರು.

ನವದೆಹಲಿ: ಚಿನ್ನ, ಬೆಳ್ಳಿ ದರ ಹೆಚ್ಚಳ ಪರ್ವ ಮುಂದುವರೆದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಿ ದರ ಕೇಜಿಗೆ 3,07,900 ರು.ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಮತ್ತೊಂದೆಡೆ ಚಿನ್ನದ ದರವೂ ಹೆಚ್ಚಳ ಕಂಡಿದ್ದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1, 7,550 ರು. ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1,50,000 ರು.ಗೆ ದರ ದಾಖಲಾಗಿದೆ.

ಶುಕ್ರವಾರಕ್ಕೆ ಹೋಲಿಸಿದರೆ ಚಿನ್ನ, ಬೆಳ್ಳಿ ದರ ಎರಡರಲ್ಲೂ ಏರಿಕೆಯಾಗಿದೆ. ಬೆಳ್ಳಿ ಶುಕ್ರವಾರ 2,98,700 ರು.ಇತ್ತು. ಆದರೆ ಸೋಮವಾರ 9200 ರು. ಹೆಚ್ಚಾಗಿದೆ. ಇನ್ನು 22 ಕ್ಯಾರೆಟ್‌ 10 ಗ್ರಾಂ ಚಿನ್ನ 1, 35,400 ಮತ್ತು 24 ಕ್ಯಾರೆಟ್‌ ಚಿನ್ನ 10 ಗ್ರಾಂಗೆ 1,47,700 ಇತ್ತು. ಆದರೆ ಸೋಮವಾರ ಕ್ರಮವಾಗಿ 2150, 2300 ರು. ಏರಿಕೆಯಾಗಿದೆ.

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ದರ ಏರಿಕೆಯಾಗಿದ್ದು ಬೆಳ್ಳಿ ಒಂದೇ ದಿನ 10,000 ಏರಿಕೆ ಕಂಡು 3,02,600 ರು.ಗೆ ತಲುಪಿದೆ. 10 ಗ್ರಾಂ ಚಿನ್ನ 1900 ರು. ಹೆಚ್ಚಳವಾಗಿ 1,48,100 ರು.ಗೆ ತಲುಪಿದೆ.

ಭರ್ಜರಿ ಏರಿಕೆ: ಕಳೆದ ಒಂದು ವರ್ಷದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 70000 ರು.ನಷ್ಟು ಏರಿಕೆಯಾಗಿದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 2 ಲಕ್ಷ ರು.ನಷ್ಟು ಹೆಚ್ಚಳವಾಗಿದೆ.

ಏರಿಕೆಗೆ ಕಾರಣಗಳೇನು?

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚಳ

ಇರಾನ್‌, ಗ್ರೀನ್‌ಲ್ಯಾಂಡ್‌ ಮೇಲೆ ಅಮೆರಿಕ ದಾಳಿಯ ಭೀತಿಯಿಂದ ಎಲ್ಲೆಡೆ ಆತಂಕ

ಅಮೆರಿಕ- ಯುರೋಪ್‌ ನಡುವೆ ತೆರಿಗೆ ಸಮರದ ಕಾರಣ ವ್ಯಾಪಾರದ ಬಿಕ್ಕಟ್ಟಿನ ಭೀತಿ

ಷೇರುಪೇಟೆ ಬಿಟ್ಟು ಚಿನ್ನ ಮತ್ತು ಬೆಳ್ಳಿಯತ್ತ ಸಾಂಸ್ಥಿಕ ಹೂಡಿಕೆದಾರರ ಗಮನ ಹೆಚ್ಚಿದ್ದು

ಕೈಗಾರಿಕಾ ವಲಯದಿಂದ ಬೆಳ್ಳಿಗೆ ಭಾರೀ ಬೇಡಿಕೆ ಕಾರಣ ದರ ಭಾರೀ ಏರಿಕೆ

ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಇಲ್ಲ, ಆದರೆ ಬೇಡಿಕೆ ಏರಿಕೆಯಿಂದ ದರ ಹೆಚ್ಚಳ

ಚಿನ್ನದ ದರ ಏರಿಕೆ ಹಾದಿ (ಪ್ರತಿ 10 ಗ್ರಾಂಗೆ)

ವರ್ಷ ದರ

1980 1000 ರು.

2007 10000 ರು.

2022 50000 ರು.

2025 100000 ರು.

2026 150000 ರು.

ಚಿನ್ನದ ದರ ಏರಿಕೆ ಹಾದಿ (ಪ್ರತಿ ಕೆಜಿಗೆ)

2004 10000 ರು.

2022 50000 ರು.

2025 100000 ರು.

2025 200000 ರು.

2025 300000 ರು.