ಸಾರಾಂಶ
ಬ್ರಿಟನ್‌ನ ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ 9 ಅಪಾಯಕಾರಿ ಸಂಗತಿಗಳ ಪಟ್ಟಿಯೊಂದನ್ನು ಬ್ರಿಟನ್ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಹಿಂದೂ ರಾಷ್ಟ್ರೀಯವಾದವನ್ನೂ ಸೇರಿಸಿದೆ. ಹಿಂದುತ್ವವನ್ನು ಹೀಗೆ ಸೈದ್ಧಾಂತಿಕವಾಗಿ ಕಳವಳಕಾರಿ ಪಟ್ಟಿಯಲ್ಲಿ ಬ್ರಿಟನ್ ಸೇರಿಸಿದ್ದು ಇದೇ ಮೊದಲು.
ನವದೆಹಲಿ: ಬ್ರಿಟನ್‌ನ ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ 9 ಅಪಾಯಕಾರಿ ಸಂಗತಿಗಳ ಪಟ್ಟಿಯೊಂದನ್ನು ಬ್ರಿಟನ್ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಹಿಂದೂ ರಾಷ್ಟ್ರೀಯವಾದವನ್ನೂ ಸೇರಿಸಿದೆ. ಹಿಂದುತ್ವವನ್ನು ಹೀಗೆ ಸೈದ್ಧಾಂತಿಕವಾಗಿ ಕಳವಳಕಾರಿ ಪಟ್ಟಿಯಲ್ಲಿ ಬ್ರಿಟನ್ ಸೇರಿಸಿದ್ದು ಇದೇ ಮೊದಲು.
ದೇಶದ ಭದ್ರತೆಗೆ ಅಪಾಯತರಬಹುದಾದ ಸಿದ್ಧಾಂತಗಳು, ಸಂಘಟನೆ ಕುರಿತು ವರದಿ ನೀಡಲು ಬ್ರಿಟನ್ ಸರ್ಕಾರ 2024ರಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ವರದಿ ಇದೀಗ ಸೋರಿಕೆಯಾಗಿದ್ದು, ಅದರಲ್ಲಿ ಹಿಂದೂ ರಾಷ್ಟ್ರೀಯವಾದಿಗಳು, ಖಲಿಸ್ತಾನಿ ಸಂಘಟನೆಯನ್ನು ಕಳವಳಕಾರಿ ಸಿದ್ಧಾಂತ, ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿದೆ.ಮೂರು ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ಬಳಿಕ ಲೀಸೆಸ್ಟರ್‌ನಲ್ಲಿ ಗಲಾಟೆ ನಡೆದಿತ್ತು. ಅದರ ಬೆನ್ನಲ್ಲೇ ಹಿಂದುತ್ವವನ್ನು ಅಪಾಯಕಾರಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
ಹಿಂದೂರಾಷ್ಟ್ರೀಯವಾದ ಮಾತ್ರವಲ್ಲದೆ ಇಸ್ಲಾಂ ಮೂಲಭೂತವಾದ, ತೀವ್ರ ಬಲಪಂಥೀಯ ವಾದ, ತೀವ್ರ ಮಹಿಳಾ ವಿರೋಧಿ ವಾದ, ಖಾಲಿಸ್ತಾನಿ ಪರ ತೀವ್ರವಾದ, ಪರಿಸರಪರ ತೀವ್ರವಾದ, ಎಡಪಂಥೀಯ ಗುಂಪು, ಅರಾಜಕತೆ ಮತ್ತು ಏಕವಿಚಾರದ ತೀವ್ರವಾದ, ಹಿಂಸಾಚಾರದ ಸೆಳೆತ ಹಾಗೂ ಪಿತೂರಿ ಸಿದ್ಧಾಂತಗಳು ಬ್ರಿಟನ್‌ನ ಗೃಹ ಇಲಾಖೆ ಪಟ್ಟಿಮಾಡಿದ ಭವಿಷ್ಯದ ಇತರೆ ಕಳವಳಕಾರಿ ಸಿದ್ಧಾಂತಗಳಾಗಿವೆ.