ಸಾರಾಂಶ
ನವದೆಹಲಿ: ಭಾರತದ 86ನೇ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆಗಿ ತಮಿಳುನಾಡಿನ 19 ವರ್ಷದ ಎಲ್.ಆರ್.ಶ್ರೀಹರಿ ಹೊರಹೊಮ್ಮಿದ್ದಾರೆ. ಯುಎಇನ ಅಲ್-ಐನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪುರುಷರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಬಾಸ್ಕೆಟ್‌ಬಾಲ್: ರಾಜ್ಯ ಬಾಲಕಿಯರಿಗೆ ಚಿನ್ನ
ಪಾಟ್ನಾ: 2025ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಗುರುವಾರ ತೆರೆ ಬಿದ್ದಿದ್ದು, ಕರ್ನಾಟಕ 17 ಚಿನ್ನ ಸೇರಿ ಒಟ್ಟು 58 ಪದಕಗಳನ್ನು ಪಡೆಯುವ ಮೂಲಕ, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಗುರುವಾರ ಬಾಲಕಿಯರ ಬಾಸ್ಕೆಟ್‌ಬಾಲ್‌ನಲ್ಲಿ ರಾಜ್ಯ ತಂಡಕ್ಕೆ ಚಿನ್ನದ ಪದಕ ದೊರೆಯಿತು. ಫೈನಲ್‌ನಲ್ಲಿ ಕರ್ನಾಟಕ ಹರ್ಯಾಣ ವಿರುದ್ಧ 86-61ರಲ್ಲಿ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರವನ್ನು 79-65 ಅಂಕಗಳಲ್ಲಿ ಸೋಲಿಸಿತ್ತು.12 ದಿನಗಳ ಕಾಲ ನಡೆದ ಅಂಡರ್-18 ವಿಭಾಗದ ಕ್ರೀಡಾಕೂಟದಲ್ಲಿ ಮಹಾರಾಷ್ಟ್ರ ಸತತ 3ನೇ ಬಾರಿಗೆ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಆ ರಾಜ್ಯವು 58 ಚಿನ್ನ, 47 ಬೆಳ್ಳಿ ಹಾಗೂ 53 ಕಂಚಿನೊಂದಿಗೆ ಒಟ್ಟು 158 ಪದಕ ಜಯಿಸಿತು. ಹರ್ಯಾಣ 39 ಚಿನ್ನ ಸೇರಿ 117 ಪದಕದೊಂದಿಗೆ 2ನೇ ಸ್ಥಾನ ಪಡೆದರೆ, ರಾಜಸ್ಥಾನ 24 ಚಿನ್ನ ಸೇರಿ 60 ಪದಕ ಗೆಲ್ಲುವ ಮೂಲಕ 3ನೇ ಸ್ಥಾನ ಪಡೆಯಿತು.