ಸಾರಾಂಶ
ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ದಂಡನಾತ್ಮಕ ಕ್ರಮಗಳು ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ.
ನವದೆಹಲಿ : ಭಾರತ-ಪಾಕ್ ಕದನ ವಿರಾಮ ಘೋಷಣೆ ಆಗಿದ್ದರೂ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ದಂಡನಾತ್ಮಕ ಕ್ರಮಗಳು ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ.
ಏಪ್ರಿಲ್ 23 ರಂದು ಪಾಕಿಸ್ತಾನದ ವಿರುದ್ಧ ಭಾರತ ಘೋಷಿಸಿದ ಕ್ರಮಗಳು ಪರಿಣಾಮಕಾರಿಯಾಗಿರುತ್ತವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಭಯೋತ್ಪಾದನೆಯ ಬಗ್ಗೆ ಭಾರತದ ದೃಢ ನಿರ್ಧಾರ ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನಕ್ಕೆ ಈಗ 85 ಸಾವಿರ ಕೋಟಿ ರು. ಐಎಂಎಫ್ ಮೊದಲ ಕಂತಿನ ಸಾಲ ನೀಡಿದೆ. ಇನ್ನೂ 2 ಕಂತುಗಳಲ್ಲಿ ಉಳಿದ ಸುಮಾರು 1.70 ಲಕ್ಷ ಕೋಟಿ ರು. ಸಾಲವನ್ನು ಪಾಕ್‌ಗೆ ಐಎಂಎಫ್ ನೀಡಬೇಕಿದೆ. ಪಾಕ್ ಈಗಲೂ ಉಗ್ರವಾದ ನಿಲ್ಲಿಸದೇ
ಹೋದರೆ ಈ ಉಳಿದ ಕಂತನ್ನು ಪಾಕ್‌ಗೆ ಕೊಡಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಷರತ್ತು ವಿಧಿಸಿದ್ದಾರೆ. ಟ್ರಂಪ್ ಷರತ್ತನ್ನು ಪಾಕ್ ಪೂರೈಸಿದ ಮೇಲಷ್ಟೇ ಭಾರತ ಕೂಡ ಸಿಂಧು ನದಿ ಒಪ್ಪಂದ ಸೇರಿ ಉಳಿದ ನಿರ್ಬಂಧ ತೆರವುಗೊಳಿಸಲಿದೆ ಎಂದು ಭಾರತ ಸರ್ಕಾರ ಷರತ್ತು ಹಾಕಿದ ಎಂದು ಅವು ಹೇಳಿವೆ.