640 ಕಂಟೇನರ್‌ ಇದ್ದ ಹಡಗು ಕೇರಳ ಕರಾವಳೀಲಿ ಮುಳುಗಡೆ

| N/A | Published : May 25 2025, 11:58 PM IST / Updated: May 26 2025, 05:08 AM IST

ಸಾರಾಂಶ

 ತೈಲ ಮತ್ತು ಅಪಾಯಕಾರಿ ಸರಕು ತುಂಬಿದ ಕಂಟೇನರ್‌ಗಳನ್ನು ಸಾಗಿಸುತ್ತಿದ್ದ ಲೈಬೀರಿಯಾದ ಹಡಗೊಂದು ಭಾನುವಾರ ಕೇರಳದ ಕರಾವಳಿಯಲ್ಲಿ ಮುಳುಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಹಡಗಿನಲ್ಲಿದ್ದ 640 ಕಂಟೇನರ್‌ಗಳ ಪೈಕಿ 100 ಸಮುದ್ರ ಪಾಲಾಗಿದೆ.

ಕೊಚ್ಚಿ: ತೈಲ ಮತ್ತು ಅಪಾಯಕಾರಿ ಸರಕು ತುಂಬಿದ ಕಂಟೇನರ್‌ಗಳನ್ನು ಸಾಗಿಸುತ್ತಿದ್ದ ಲೈಬೀರಿಯಾದ ಹಡಗೊಂದು ಭಾನುವಾರ ಕೇರಳದ ಕರಾವಳಿಯಲ್ಲಿ ಮುಳುಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಹಡಗಿನಲ್ಲಿದ್ದ 640 ಕಂಟೇನರ್‌ಗಳ ಪೈಕಿ 100 ಸಮುದ್ರ ಪಾಲಾಗಿದೆ.

ಭಾರತೀಯ ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ಲ 24 ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.

‘ಭಾರತೀಯ ನೌಕಾಪಡೆಯ ಐಎನ್‌ಎಸ್‌ ಸುಜಾತಾ ಹಡಗಿನ ಸಹಾಯದಿಂದ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಹಡಗಿನಲ್ಲಿ ಒಟ್ಟು 640 ಕಂಟೇನರ್‌ಗಳಿದ್ದವು. ಅವುಗಳಲ್ಲಿ 13 ಅಪಾಯಕಾರಿ ಸರಕುಗಳನ್ನು ಹೊಂದಿದ್ದರೆ, ಕ್ಯಾಲ್ಸಿಯಂ ಕಾರ್ಬೈಡ್ ಹೊಂದಿರುವ 12 ಕಂಟೇನರ್‌ಗಳಿದ್ದವು. ತೈಲ ಸೋರಿಕೆಯಿಂದಾಗಬಹುದಾದ ಅಪಾಯಗಳನ್ನು ತಡೆಗಟ್ಟಲು ಮಾಲಿನ್ಯ ಪ್ರತಿಕ್ರಿಯೆ ಸಾಧನಗಳನ್ನು ಹೊಂದಿರುವ ಸಕ್ಷಮ್ ಹಡಗನ್ನು ಸ್ಥಳದಲ್ಲಿ ಇರಿಸಲಾಗಿದೆ’ ಎಂದು ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ.

367 ಡ್ರೋನ್‌ ಬಳಸಿ ಉಕ್ರೇನ್

ಮೇಲೆ ರಷ್ಯಾದ ಭೀಕರ ದಾಳಿ

 ಕೀವ್‌: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಮುಂದುವರೆದಿದ್ದು, ಭಾನುವಾರ ಉಕ್ರೇನ್ ರಾಜಧಾನಿ ಕೀವ್‌ ಸೇರಿದಂತೆ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ರಷ್ಯಾ 367 ಡ್ರೋನ್ ಬಳಸಿ ಭೀಕರ ವೈಮಾನಿಕ ದಾಳಿ ನಡೆಸಿದೆ. ದಾಳಿಯಲ್ಲಿ ಉಕ್ರೇನ್‌ನ 12 ನಾಗರಿಕರು ಸಾವನ್ನಪ್ಪಿದ್ದಾರೆ.

ರಷ್ಯಾ ಕಳೆದ ಮೂರು ವರ್ಷಗಳ ಯುದ್ಧದಲ್ಲಿಯೇ ಭಾನುವಾರ ಏಕಕಾಲದಲ್ಲಿ ಅತಿ ಹೆಚ್ಚು ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿದ್ದು, 69 ಕ್ಷಿಪಣಿ, 298 ಡ್ರೋನ್ ಬಳಸಿದೆ ಎಂದು ಉಕ್ರೇನ್ ಹೇಳಿದೆ. ಇನ್ನು ಈ ಬಗ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪ್ರತಿಕ್ರಿಯಿಸಿದ್ದು,‘ ರಷ್ಯಾದ ಕ್ಷಿಪಣಿ ಮತ್ತು ಡ್ರೋನ್‌ಗಳು 30 ಸಾಮಾನ್ಯ ನಗರಗಳ ಮೇಲೆ ದಾಳಿ ಮಾಡಿದೆ’ ಎಂದಿದ್ದಾರೆ. ಆದರೆ ರಷ್ಯಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕಳೆದ ರಾತ್ರಿ 110 ಉಕ್ರೇನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದಿದೆ.ಎರಡು ದೇಶಗಳ ನಡುವಿನ ಈ ಸಂಘರ್ಷದ ನಡುವೆ ರಷ್ಯಾ ಮತ್ತು ಉಕ್ರೇನ್ ತಮ್ಮ ವಶದಲ್ಲಿದ್ದ ಸುಮಾರು 303 ಕೈದಿಗಳ ನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ. ಇದು ಎರಡು ದೇಶಗಳ ನಡುವೆ ಯುದ್ಧ ಆರಂಭವಾದ ಬಳಿಕ ನಡೆದ ಮೂರನೇ ಅತಿದೊಡ್ಡ ವಿನಿಮಯ ಪ್ರಕ್ರಿಯೆ ಆಗಿದೆ.

Read more Articles on