‘ಆದಾಯ ರಿಟರ್ನ್ಸ್‌ ಸಲ್ಲಿಸುವರು ಹೆಚ್ಚಿನ ರೀಫಂಡ್‌ ಪಡೆಯಲು ಬೋಗಸ್ ಕ್ಲೇಂ ಮಾಡಿದರೆ ಶಿಕ್ಷೆ

| Published : Jul 29 2024, 12:50 AM IST / Updated: Jul 29 2024, 04:42 AM IST

ಸಾರಾಂಶ

‘ಆದಾಯ ರಿಟರ್ನ್ಸ್‌ ಸಲ್ಲಿಸುವ ಗ್ರಾಹಕರು, ಹೆಚ್ಚಿನ ರೀಫಂಡ್‌ ಪಡೆಯುವ ಸಲುವಾಗಿ ಕಡಿಮೆ ಆದಾಯ ತೋರಿಸುವುದು ಮತ್ತು ಹೆಚ್ಚಿನ ವೆಚ್ಚ ತೋರಿಸುವುದು ಶಿಕ್ಷಾರ್ಹ ಅಪರಾಧ’ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ನವದೆಹಲಿ: ‘ಆದಾಯ ರಿಟರ್ನ್ಸ್‌ ಸಲ್ಲಿಸುವ ಗ್ರಾಹಕರು, ಹೆಚ್ಚಿನ ರೀಫಂಡ್‌ ಪಡೆಯುವ ಸಲುವಾಗಿ ಕಡಿಮೆ ಆದಾಯ ತೋರಿಸುವುದು ಮತ್ತು ಹೆಚ್ಚಿನ ವೆಚ್ಚ ತೋರಿಸುವುದು ಶಿಕ್ಷಾರ್ಹ ಅಪರಾಧ’ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ ಇಂಥ ಸುಳ್ಳು ಮಾಹಿತಿ ರೀಫಂಡ್‌ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬಕ್ಕೂ ಕಾರಣವಾಗಬಹುದು ಎಂದು ಹೇಳಿದೆ.

ಇದೇ ವೇಳೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಿ ಬಹಳ ದಿನವಾದರೂ ರೀಫಂಡ್‌ ಬರದೇ ಇದ್ದ ಪಕ್ಷದಲ್ಲಿ, ಗ್ರಾಹಕರು ಆದಾಯ ತೆರಿಗೆ ಇಲಾಖೆಯಿಂದ ಯಾವುದಾದರೂ ಸಂದೇಶ ಬಂದಿದೆದೆಯೇ ಎಂದು ಪರೀಕ್ಷಿಸಬೇಕು. ಬಂದಿದ್ದರೆ, ಅದರಲ್ಲಿನ ಸೂಚನೆಯಂತೆ ಮುಂದುವರೆಯಬೇಕು. ಇಂಥ ಸಂದೇಶಗಳು ಇ ಫೈಲಿಂಗ್‌ ಅಕೌಂಟ್‌ನ ಪೆಂಡಿಂಗ್‌ ಆ್ಯಕ್ಷನ್‌ ಮತ್ತು ವರ್ಕ್‌ ಲಿಸ್ಟ್‌ ಸೆಕ್ಷನ್‌ನಲ್ಲಿ ಇರುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಐಟಿ ರಿಟರ್ನ್ಸ್‌ ಸಲ್ಲಿಕೆಗೆ 2 ದಿನ ಮಾತ್ರ ಬಾಕಿ

2024-25ನೇ ಸಾಲಿನಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆಗೆ ಇದೇ ಜು.31 ಕಡೆಯ ದಿನವಾಗಿದೆ. ಲೆಕ್ಕಪರಿಶೋಧನೆಗೆ ಒಳಪಡಬೇಕಿಲ್ಲದ ಆದಾಯ ತೆರಿಗೆ ಪಾವತಿದಾರರು ರಿಟರ್ನ್ಸ್‌ ಸಲ್ಲಿಸಬೇಕು. ಜು.26ರವರೆಗೂ 5 ಕೋಟಿಗೂ ಹೆಚ್ಚಿನ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಿದ್ದಾರೆ.