3 ಕ್ರಿಮಿನಲ್‌ ಕಾಯ್ದೆಗಳು ಜುಲೈ 1 ರಿಂದ ಜಾರಿಗೆ

| Published : Feb 25 2024, 01:48 AM IST / Updated: Feb 25 2024, 10:24 AM IST

law

ಸಾರಾಂಶ

ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷಿ ಕಾಯ್ದೆ ಶೀಘ್ರ ಜಾರಿಗೆ ಜಾರಿಗೆ ಬರಲಿದ್ದು, ಜುಲೈ 1ರಿಂದ ಕಾರ್ಯರೂಪದಲ್ಲಿ ಬಳಸಲಾಗುವುದು. ಕಳೆದ ವರ್ಷ ಡಿ.21ರಂದು ಅಂಗೀಕಾರಗೊಂಡಿದ್ದ ಮಸೂದೆಗಳು ಅಂತಿಮ ರೂಪ ಪಡೆದಿವೆ.

ನವದೆಹಲಿ: ದೇಶದಲ್ಲಿನ ಅಪರಾಧ ನ್ಯಾಯ ವ್ಯವಸ್ಥೆಯನ್ನು ಪರಿಷ್ಕರಿಸಿ ಹೊಸದಾಗಿ ರೂಪಿಸಲಾಗಿರುವ ಮೂರು ಕ್ರಿಮಿನಲ್‌ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಸರ್ಕಾರ ತಿಳಿಸಿದೆ.

ಈ ಬಗ್ಗೆ ಶನಿವಾರ ಅಧಿಸೂಚನೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು ‘ಮೂರು ಹೊಸ ಕ್ರಿಮಿನಲ್‌ ಕಾನೂನುಗಳು ಜು.1ರ 2024ರಂದು ಜಾರಿಯಾಗಲಿವೆ’ ಎಂದು ತಿಳಿಸಿದೆ. 

ವಸಾಹತುಶಾಹಿ ಕಾಲದ ಭಾರತದ 1860 ರ ಭಾರತೀಯ ದಂಡ ಸಂಹಿತೆ, 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಈ ಹೊಸ ಕಾನೂನುಗಳು ಬದಲಿಸುತ್ತವೆ. 

ಮೂರು ಶಾಸನಗಳು ವಿವಿಧ ಅಪರಾಧಗಳು ಮತ್ತು ಅವುಗಳ ಶಿಕ್ಷೆಗಳ ವ್ಯಾಖ್ಯಾನಗಳನ್ನು ನೀಡುತ್ತವೆ. ಕಳೆದ ವರ್ಷ ಡಿಸೆಂಬರ್‌ 21 ರಂದು ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡಲಾಗಿತ್ತು. ಬಳಿಕ ಡಿ.25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗೆ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದರು.