ಪ್ರಧಾನಿ ನರೇಂದ್ರ ಮೋದಿ ಉತ್ತಮ ವಾಗ್ಮಿ, ಮೋಡಿಗಾರ : ಬಾಲಿವುಡ್ ನಟ ರಣಬೀರ್ ಕಪೂರ್ ಮೆಚ್ಚುಗೆ

| Published : Jul 29 2024, 12:46 AM IST / Updated: Jul 29 2024, 04:56 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಉತ್ತಮ ವಾಗ್ಮಿ. ಅವರು ತಮ್ಮ ಮಾತಿನ ಮೂಲಕವೇ ಮೋಡಿ ಮಾಡುವ ಕಾಂತೀಯ ಸೆಳೆತ ಹೊಂದಿದ್ದಾರೆ ಎಂದು ಬಾಲಿವುಡ್ ನಟ ರಣಬೀರ್ ಕಪೂರ್ ಪ್ರಶಂಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉತ್ತಮ ವಾಗ್ಮಿ. ಅವರು ತಮ್ಮ ಮಾತಿನ ಮೂಲಕವೇ ಮೋಡಿ ಮಾಡುವ ಕಾಂತೀಯ ಸೆಳೆತ ಹೊಂದಿದ್ದಾರೆ ಎಂದು ಬಾಲಿವುಡ್ ನಟ ರಣಬೀರ್ ಕಪೂರ್ ಪ್ರಶಂಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಪೂರ್‌, ತಾವು 2019ರಲ್ಲಿ ಮೊದಲ ಬಾರಿ ಮೋದಿಯವರನ್ನು ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡರು. ‘ನಾಲ್ಕೈದು ವರ್ಷಗಳ ಹಿಂದೆ ಸಹ ನಟರು ಹಾಗೂ ನಿರ್ದೇಶಕರೊಂದಿಗೆ ಅವರನ್ನು ಭೇಟಿಯಾಗಿದ್ದೆ. ಅವರಲ್ಲಿ ಅಯಸ್ಕಾಂತದಂತೆ ಆಕರ್ಷಿಸುವ ಶಕ್ತಿ ಇದೆ’ ಎಂದರು.

‘ನನ್ನ ತಂದೆಯವರಾದ ದಿ.ರಿಷಿ ಕಪೂರ್‌ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರ ಆರೊಗ್ಯದ ಬಗ್ಗೆ ವಿಚಾರಿಸಿದ್ದ ಮೋದಿ, ಅನ್ಯರೊಂದಿಗೂ ವೈಯಕ್ತಿಕ ವಿಷಯಗಳ ಬಗ್ಗೆ ಮಾತಾಡಿದರು. ಅದರ ಅಗತ್ಯ ಅವರಿಗೆ ಇರಲಿಲ್ಲ. ಆದರೂ ಅವರ ಮಾತುಗಳು ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳುತ್ತದೆ’ ಎಂದು ಕಪೂರ್ ಪ್ರಧಾನಿ ಮೋದಿ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಇದೇ ವೇಳೆ ತಾವು ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.