ಮೊದಲ ರಾಮನವಮಿಗೆ ಅಯೋಧ್ಯೆಯಲ್ಲಿ ಸಿದ್ಧತೆ ಪ್ರಧಾನಿ ಮೋದಿ ಭೇಟಿ?

| Published : Mar 22 2024, 01:06 AM IST / Updated: Mar 22 2024, 08:52 AM IST

ಮೊದಲ ರಾಮನವಮಿಗೆ ಅಯೋಧ್ಯೆಯಲ್ಲಿ ಸಿದ್ಧತೆ ಪ್ರಧಾನಿ ಮೋದಿ ಭೇಟಿ?
Share this Article
  • FB
  • TW
  • Linkdin
  • Email

ಸಾರಾಂಶ

ರಾಮನವಮಿ ಸಮೀಪಿಸುತ್ತಿದಂತೆ ಅಯೋಧ್ಯೆಯ ರಾಮನಗರಿ ತನ್ನ ಮೊದಲ ಹಬ್ಬಕ್ಕೆ ತಯಾರಾಗುತ್ತಿದೆ. ಈ ಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಯೋಧ್ಯೆ: ರಾಮನವಮಿ ಸಮೀಪಿಸುತ್ತಿದಂತೆ ಅಯೋಧ್ಯೆಯ ರಾಮನಗರಿ ತನ್ನ ಮೊದಲ ಹಬ್ಬಕ್ಕೆ ತಯಾರಾಗುತ್ತಿದೆ. ಈ ಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 

ಜ.22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿ ಇದಾಗಿದ್ದು, ಹೀಗಾಗಿ ರಾಮನ ಜನ್ಮದಿನವನ್ನು ಆಚರಿಸಲು ಇಡೀ ಅಯೋಧ್ಯೆಯೇ ಕಾತರದಿಂದ ಕಾಯುತ್ತಿದೆ. 

ಅಂದು ದೇಶ ವಿದೇಶಗಳಿಂದ ಲಕ್ಷೋಪಲಕ್ಷ ಭಕ್ತ ಗಣಗಳು ರಾಮನ ದರ್ಶನಕ್ಕೆ ಆಗಮಿಸಲಿದೆ. ಈ ದಿನ ರಾಮ ಮಂದಿರದಲ್ಲಿ ರಾಮನ ಭಕ್ತಿಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜಾ ಕೈಂಕರ್ಯಗಳು ನೆರವೇರಲಿದೆ. ಸಂಜೆ ವೇಳೆ ದೀಪೋತ್ಸವ ಇರಲಿದೆ ಎಂದು ಮೂಲಗಳು ತಿಳಿಸಿವೆ.