ಸಾರಾಂಶ
ಈ ಬಾರಿ ಲೋಕಸಭಾ ಚುನಾವಣೆಗೆ 48 ಸಾವಿರ ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ನವದೆಹಲಿ: ಪ್ರಸ್ತುತ ಜರುಗಲಿರುವ 18ನೇ ಲೋಕಸಭಾ ಚುನಾವಣೆಗೆ 48 ಸಾವಿರ ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
2019ರಲ್ಲಿ ತೃತೀಯ ಲಿಂಗಿಗಳ ಪೈಕಿ ಉತ್ತರಪ್ರದೇಶ ಅತಿ ಹೆಚ್ಚು (7,797), ತಮಿಳುನಾಡು (5.793) ಮತ್ತು ಕರ್ನಾಟಕ (4,826) ರಾಜ್ಯಗಳು ಮೊದಲ 4 ಸ್ಥಾನದಲ್ಲಿದ್ದವು. ಅರುಣಾಚಲ ಪ್ರದೇಶ, ದಮನ್ ದಿಯು, ಗೋವಾ, ಲಕ್ಷದ್ವೀಪ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಒಬ್ಬರೂ ತೃತೀಯ ಲಿಂಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿಲ್ಲ.