ವೀಪಿ ಚುನಾವಣೆ ಅಡ್ಡ ಮತದಾನ: ಇಂಡಿಯಾ ಕೂಟದಲ್ಲಿ ಒಡಕು

| Published : Sep 11 2025, 12:04 AM IST

ವೀಪಿ ಚುನಾವಣೆ ಅಡ್ಡ ಮತದಾನ: ಇಂಡಿಯಾ ಕೂಟದಲ್ಲಿ ಒಡಕು
Share this Article
  • FB
  • TW
  • Linkdin
  • Email

ಸಾರಾಂಶ

ಉಪರಾಷ್ಟ್ರಪತಿ (ವೀಪಿ) ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ ಅವರ ಪರ ವಿಪಕ್ಷಗಳ ಸಂಸದರು ಅಡ್ಡ ಮತದಾನ ನಡೆದ ಬಗ್ಗೆ ಇಂಡಿಯಾ ಕೂಟದಲ್ಲಿ ಒಡಕು ಸೃಷ್ಟಿಯಾಗಿದೆ,

ನವದೆಹಲಿ: ಉಪರಾಷ್ಟ್ರಪತಿ (ವೀಪಿ) ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ ಅವರ ಪರ ವಿಪಕ್ಷಗಳ ಸಂಸದರು ಅಡ್ಡ ಮತದಾನ ನಡೆದ ಬಗ್ಗೆ ಇಂಡಿಯಾ ಕೂಟದಲ್ಲಿ ಒಡಕು ಸೃಷ್ಟಿಯಾಗಿದೆ,

‘ಅಡ್ಡಮತದ ವಿರುದ್ಧ ಆಂತರಿಕ ತನಿಖೆ ಮಾಡಬೇಕು. ಅಡ್ಡ ಮತದಾನ ಇಂಡಿಯಾ ಕೂಟದ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ’ ಎಂದು ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ ಆಗ್ರಹಿಸಿದ್ದಾರೆ. ಇನ್ನು ಟಿಎಂಸಿ ಮೂಲಗಳು ಪ್ರತಿಕ್ರಿಯಿಸಿ, ‘ಬಿಜೆಪಿ ಜತೆ ಸಖ್ಯ ಬೆಳೆಸಿರುವ ಆಪ್ ಸಂಸದರು ಅಡ್ಡಮತದಾನ ಮಾಡಿದಂತಿದೆ’ ಎಂದು ಆರೋಪಿಸಿವೆ.

ಅಡ್ಡ ಮತದಾನ ಕುರಿತು ಮಾತನಾಡಿದ ಮನೀಶ್‌, ‘ಚುನಾವಣೆಯಲ್ಲಿ ಅಡ್ಡ ಮತದಾನವಾಗಿದ್ದರೆ, ಅದನ್ನು ಇಂಡಿಯಾ ಕೂಟದ ಎಲ್ಲಾ ಘಟಕಗಳು ಆಂತರಿಕ ತನಿಖೆ ನಡೆಸಬೇಕು. ಅಡ್ಡ ಮತದಾನ ಗಂಭೀರವಾದ ವಿಷಯವಾಗಿದ್ದು, ಆಂತರಿಕ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಇವು ನಂಬಿಕೆ ಮತ್ತು ವಿಶ್ವಾಸದ ಲೋಪ’ ಎಂದು ಅಸಮಾಧಾನ ಹೊರಹಾಕಿದದ್ದಾರೆ,

ಮತ್ತೊಂದೆಡೆ ಬುಧವಾರ ಸಚಿವ ಕಿರಣ್‌ ರಿಜಿಜು ಅವರು ವಿಪಕ್ಷದ ಸಂಸದರಿಗೆ ಅಡ್ಡ ಮತದಾನ ಮಾಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.