2026ರ ಫೆ.7 ರಿಂದ ಟಿ20 ವಿಶ್ವಕಪ್‌ ಆರಂಭ ?

| N/A | Published : Sep 10 2025, 01:05 AM IST

ಸಾರಾಂಶ

ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ ಫೆ.7 ರಿಂದ ಮಾರ್ಚ್‌ 8ರ ತನಕ ನಡೆಯುವ ಸಾಧ್ಯತೆಯಿದ್ದು, 20 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

 ನವದೆಹಲಿ: ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ ಫೆ.7 ರಿಂದ ಮಾರ್ಚ್‌ 8ರ ತನಕ ನಡೆಯುವ ಸಾಧ್ಯತೆಯಿದ್ದು, 20 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಪಂದ್ಯಗಳು ಭಾರತದ 5 ನಗರ ಮತ್ತು ಶ್ರೀಲಂಕಾದ 2 ಕ್ರೀಡಾಂಗಣಗಳಲ್ಲಿ ನಡೆಯಲಿವೆ.

 ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ ಒಂದು ವೇಳೆ ಪಾಕಿಸ್ತಾನ ಫೈನಲ್‌ಗೇರಿದರೆ ಆ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಐಸಿಸಿ ಇನ್ನು ವೇಳಾಪಟ್ಟಿ ಅಂತಿಮಗೊಳಿಸಿಲ್ಲ. ಈಗಾಗಲೇ ಭಾರತ ಸೇರಿ 15 ತಂಡಗಳು ವಿಶ್ವಕಪ್‌ ಅರ್ಹತೆ ಪಡೆದಿದ್ದು, ಇನ್ನೂ 5 ತಂಡಗಳು ಯಾವುವೆಂದು ನಿರ್ಧಾರವಾಗಬೇಕಿದೆ. 2024ರ ಮಾದರಿಯಲ್ಲೇ ಮುಂದಿನ ವಿಶ್ವಕಪ್‌ ಸಹ ನಡೆಯಲಿದೆ. ಮಾ.15-ಮೇ 31ರ

ತನಕ ಐಪಿಎಲ್‌?

2026ರ ಐಪಿಎಲ್‌ ಟೂರ್ನಿಯು ಮಾ.15ರಿಂದ ಮೇ 31ರ ವರೆಗೂ ನಡೆಯಬಹುದು ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ಬಿಸಿಸಿಐ ಡಬ್ಲ್ಯುಪಿಎಲ್‌ ಆಯೋಜಿಸಲಿದೆ.

Read more Articles on