ಸಾರಾಂಶ
ಸಾಮಾಜಿಕ ಜಾಲತಾಣ ನಿಷೇಧದ ವಿರುದ್ಧ ಆರಂಭವಾದ ಪ್ರತಿಭಟನೆಯು ನೇಪಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಅಲ್ಲಿನ ಪೊಲೀಸರೇ ಆಸ್ಪತ್ರೆ, ಶಾಲೆಗೆ ನುಗ್ಗಿ ಗುಂಡಿನ ಮಳೆಗರೆದಿದ್ದಾರೆ, ಮನೆಗಳಿಗೆ ನುಗ್ಗಿ ಅತ್ಯಾ*ರವೆಸಗಿದ್ದಾರೆ ಎಂದು ಅಲ್ಲಿನ ಸಾಮಾಜಿಕ ಜಾಲತಾಣದ ಪ್ರಭಾವಿಗಳು ಆರೋಪಿಸಿದ್ದಾರೆ.
ಕಾಠ್ಮಂಡು: ಸಾಮಾಜಿಕ ಜಾಲತಾಣ ನಿಷೇಧದ ವಿರುದ್ಧ ಆರಂಭವಾದ ಪ್ರತಿಭಟನೆಯು ನೇಪಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಅಲ್ಲಿನ ಪೊಲೀಸರೇ ಆಸ್ಪತ್ರೆ, ಶಾಲೆಗೆ ನುಗ್ಗಿ ಗುಂಡಿನ ಮಳೆಗರೆದಿದ್ದಾರೆ, ಮನೆಗಳಿಗೆ ನುಗ್ಗಿ ಅತ್ಯಾ*ರವೆಸಗಿದ್ದಾರೆ ಎಂದು ಅಲ್ಲಿನ ಸಾಮಾಜಿಕ ಜಾಲತಾಣದ ಪ್ರಭಾವಿಗಳು ಆರೋಪಿಸಿದ್ದಾರೆ.
‘ಪ್ರತಿಭಟನೆಯು ಕೇವಲ ಸಾಮಾಜಿಕ ಜಾಲತಾಣದ ನಿಷೇಧದ ವಿರುದ್ಧವಾಗಿರಲಿಲ್ಲ. ಬದಲಿಗೆ ಭ್ರಷ್ಟ ಸರ್ಕಾರದ ವಿರುದ್ಧವಾಗಿತ್ತು. ಪ್ರತಿಭಟನೆ ನಡೆಸುತ್ತಿದ್ದ ‘ಝೆನ್ ಜೀ’ಗಳು ಯಾವುದೇ ಆಯುಧಗಳನ್ನು ಹೊಂದದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಪೊಲೀಸರು ರಬ್ಬರ್ ಗುಂಡುಗಳನ್ನು ಬಳಸುವ ಬದಲು, ನಿಜವಾದ ಬುಲೆಟ್‌ಗಳನ್ನು ಬಳಸಿ ದಾಳಿ ಮಾಡಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ನುಗ್ಗಿ ಹೊಡೆದು ಕೊಂದರು. ಶಾಲಾ ಮಕ್ಕಳ ಮೇಲೆ ದಾಳಿ ಮಾಡಿ ಕೊಂದರು. ಮನೆಗಳಿಗೆ ನುಗ್ಗಿ ಅತ್ಯಾ*ರವೆಸಗಿದರು. ವಿಶ್ವ ಸಂಸ್ಥೆಯ ಪೊಲೀಸ್ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರು.
ಜನರನ್ನು ರಕ್ಷಿಸಬೇಕಿದ್ದವರೇ ಕೊ* ಮಾಡುತ್ತಿದ್ದಾರೆ’ ಎಂದು ಇನ್‌ಫ್ಲುಯೆನ್ಸರ್ ರುತ್ ಕಾಡಾ ಆರೋಪಿಸಿದ್ದಾರೆ.