ಮೂಗಿಗೆ ನೀರು ತಾಕದಂತೆ ನಿಗಾ ವಹಿಸಿ : ಶಬರಿಮಲೆ ಯಾತ್ರಿಕರಿಗೆ ಎಚ್ಚರಿಕೆ

| N/A | Published : Nov 16 2025, 08:32 AM IST

sabarimala

ಸಾರಾಂಶ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ, ನ.17ರಿಂದ ಆರಂಭವಾಗಲಿರುವ ಶಬರಿಮಲೆಯಾತ್ರೆ ಯಾತ್ರಿಕರಿಗೆ ಕೇರಳ ಸರ್ಕಾರವು ಆರೋಗ್ಯ ಮಾರ್ಗದರ್ಶಿ ಬಿಡುಗಡೆ ಮಾಡಿದೆ.

 ಪಟ್ಟಣಂತಿಟ್ಟ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ, ನ.17ರಿಂದ ಆರಂಭವಾಗಲಿರುವ ಶಬರಿಮಲೆಯಾತ್ರೆ ಯಾತ್ರಿಕರಿಗೆ ಕೇರಳ ಸರ್ಕಾರವು ಆರೋಗ್ಯ ಮಾರ್ಗದರ್ಶಿ ಬಿಡುಗಡೆ ಮಾಡಿದೆ.

ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ತಾಕದಂತೆ ಎಚ್ಚರಿಕೆ

ಅದರಲ್ಲಿ, ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ತಾಕದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ. ಇದೇ ವೇಳೆ ಯಾತ್ರೆಗೆ ಬರುವಾಗ ನಿಮ್ಮೊಂದಿಗೆ ಅಗತ್ಯ ಔಷಧ ತರಬೇಕು, ಯಾತ್ರೆ ಆರಂಭಕ್ಕೂ ಕೆಲ ದಿನಗಳ ಮೊದಲೇ ವಾಕಿಂಗ್‌ ಅಭ್ಯಾಸ ಮಾಡಿಕೊಳ್ಳಿ. ಬೆಟ್ಟ ಹತ್ತುವಾಗ ಯಾವುದೇ ಧಾವಂತ ಮಾಡದೆ ನಿಧಾನವಾಗಿ ಹತ್ತಿ. 

ಆರೋಗ್ಯ ಸಹಾಯ ಬೇಕಿದ್ದಲ್ಲಿ ಸಂಪರ್ಕಿಸಿ

ಆರೋಗ್ಯ ಸಹಾಯ ಬೇಕಿದ್ದಲ್ಲಿ ಅಲ್ಲಿನ ಸಿಬ್ಬಂದಿಯನ್ನು ಕೂಡಲೇ ಸಂಪರ್ಕಿಸಿ, ಒಂದು ವೇಳೆ ಹಾವು ಕಡಿದಲ್ಲಿ ತಕ್ಷಣವೇ ಸಿಬ್ಬಂದಿ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸೂಚಿಸಿದೆ. ಯಾತ್ರಿಕರು ಬಯಲು ಬಹಿರ್ದೆಸೆಯನ್ನು ನಿಷೇಧಿಸಲಾಗಿದೆ. ಜೊತೆಗೆ ನಿಗದಿತ ಸ್ಥಳಗಳಲ್ಲಿಯೇ ಶೌಚಕರ್ಮ ಮುಗಿಸಿ, ಅಗತ್ಯ ಸಾಬೂನಿನಿಂದ ಕೈತೊಳೆದುಕೊಳ್ಳಬೇಕೆಂದಿದೆ. ಇದೇ ವೇಳೆ ಯಾತ್ರಿಕರು ಕೇವಲ ಬಿಸಿ ನೀರನ್ನು ಕುಡಿಯಬೇಕಾಗಿ ಹೇಳಿದೆ. ತುರ್ತು ಪರಿಸ್ಥಿತಿಗೆ 04735 203232 ಸಂಖ್ಯೆಗೆ ಕರೆ ಮಾಡಬಹುದೆಂದು ತಿಳಿಸಿದೆ.

Read more Articles on