ಸಾರಾಂಶ
ಬಿಹಾರದಲ್ಲಿ ಆರ್‌ಜೆಡಿ ಸೋತು ಸುಣ್ಣವಾದ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ಗೆ ಮತ್ತೊಂದು ಆಘಾತ ಎದುರಾಗಿದ್ದು, ಪುತ್ರಿ ರೋಹಿಣಿ ಆಚಾರ್ಯ, ರಾಜಕೀಯ ಮತ್ತು ಕುಟುಂಬದೊಂದಿಗಿನ ಸಂಬಂಧ ಕಡಿತಗೊಳಿಸಿ ಕೊಳ್ಳುವುದರ ಬಗ್ಗೆ ಘೋಷಿಸಿದ್ದಾರೆ. ಈ ಮೂಲಕ ಲಾಲು ಕುಟುಂಬದ ಕಲಹ ಮತ್ತೊಮ್ಮೆ ಬೀದಿಗೆ
ಪಟನಾ: ಬಿಹಾರದಲ್ಲಿ ಆರ್‌ಜೆಡಿ ಸೋತು ಸುಣ್ಣವಾದ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ಗೆ ಮತ್ತೊಂದು ಆಘಾತ ಎದುರಾಗಿದ್ದು, ಪುತ್ರಿ ರೋಹಿಣಿ ಆಚಾರ್ಯ, ರಾಜಕೀಯ ಮತ್ತು ಕುಟುಂಬದೊಂದಿಗಿನ ಸಂಬಂಧ ಕಡಿತಗೊಳಿಸಿ ಕೊಳ್ಳುವುದರ ಬಗ್ಗೆ ಘೋಷಿಸಿದ್ದಾರೆ. ಈ ಮೂಲಕ ಲಾಲು ಕುಟುಂಬದ ಕಲಹ ಮತ್ತೊಮ್ಮೆ ಬೀದಿಗೆ ಬಂದಿದೆ.
ಮಾರ್ಮಿಕವಾಗಿ ಟ್ವೀಟ್ ಮಾಡಿರುವ ರೋಹಿಣಿ
ಈ ಕುರಿತು ಮಾರ್ಮಿಕವಾಗಿ ಟ್ವೀಟ್ ಮಾಡಿರುವ ರೋಹಿಣಿ, ‘ಸೋಲಿನ ಎಲ್ಲಾ ಹೊಣೆಯನ್ನು ನಾನು ಹೊರುತ್ತಿದ್ದೇನೆ. ಸಂಜಯ್ ಯಾದವ್ ಮತ್ತು ರಮೀಜ್ ಸೂಚನೆಯಂತೆ ರಾಜಕೀಯ ಮತ್ತು ಕುಟುಂಬವನ್ನು ತೊರೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಚುನಾವಣಾ ಸೋಲಿಗೆ ಅವರೇ ಕಾರಣ ಎಂಬರ್ಥ
ಸಂಜಯ್ ಮತ್ತು ರಮೀಜ್, ಲಾಲು ಪುತ್ರ ತೇಜಸ್ವಿ ಯಾದವ್ ಆಪ್ತರಾಗಿದ್ದು, ಚುನಾವಣಾ ಸೋಲಿಗೆ ಅವರೇ ಕಾರಣ ಎಂಬರ್ಥದ ರೀತಿಯಲ್ಲಿ ರೋಹಿಣಿ ಈ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ತಮ್ಮ ಇನ್ನೊಬ್ಬ ಸೋದರ ತೇಜ್ ಪ್ರತಾಪ್ ಯಾದವ್ ಅವರನ್ನು ಲಾಲು 6 ವರ್ಷ ಪಕ್ಷದಿಂದ ಹೊರಹಾಕಿದ್ದಕ್ಕೆ ರೋಹಿಣಿ ಆಕ್ಷೇಪ ವ್ಯಕ್ತಪಡಿಸಿದ್ದರು.
;Resize=(690,390))
)
;Resize=(128,128))
;Resize=(128,128))